ಹಂಪಿಯಲ್ಲಿ ಭಾನುವಾರ ನಡೆದ ಗೋ ಹೆರಿಟೇಜ್ ರನ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿದರು. ಎಸ್ಪಿ ಎಸ್.ಜಹ್ನವಿ, ಡಿವೈಎಸ್‌ಪಿ ಡಾ.ಟಿ.ಮಂಜುನಾಥ ಇತರರಿದ್ದರು.
ಹಂಪಿಯಲ್ಲಿ ಗೋ ಹೆರಿಟೇಜ್ ರನ್ ಕಾರ್ಯಕ್ರಮ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ
ಹೊಸಪೇಟ: ಪರಂಪರೆ, ಪ್ರವಾಸೋದ್ಯಮ ಹಾಗೂ ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಹಂಪಿಯಲ್ಲಿ ಭಾನುವಾರ ನಡೆದ ಗೋ ಹೆರಿಟೇಜ್ ರನ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿದರು.
ಹಂಪಿ ಗಾಯತ್ರಿ ಪೀಠ ವೇದಿಕೆಯಿಂದ ಆರಂಭವಾದ ಓಟದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಜನ ಭಾಗವಹಿಸಿದ್ದರು. ಕೃಷ್ಣ ದೇಗುಲ, ಕೃಷ್ಣ ಬಜಾರ್, ರಾಣಿ ಸ್ನಾನಗೃಹ ಹಾಗೂ ತಳವಾರ್ ಘಟ್ಟ ಸೇರಿ ಇತರೆ ಸ್ಮಾರಕಗಳ ಮೂಲಕ ಓಟದ ಕಾರ್ಯಕ್ರಮ ನಡೆಯಿತು.
ನಗರ ಸೇರಿದಂತೆ ಹಂಪಿ, ಬಳ್ಳಾರಿ, ಗಂಗಾವತಿ, ಕಂಪ್ಲಿ ಹಾಗೂ ಸ್ಥಳೀಯರು ಭಾಗವಹಿಸುವುದರ ಜತೆಗೆ ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ, ನವದೆಹಲಿ, ದಾವಣಗೆರೆ ಇತರೆ ಕಡೆಯ ಪ್ರವಾಸಿಗರು ಕೂಡ ಭಾಗವಹಿಸಿದರು.