ಅನಧಿಕೃತ ಆಸ್ತಿಗಳಿಗೆ ಸರ್ಕಾರ ಎ ಖಾತಾ ನೀಡಲಿ

ಹೊಸಪೇಟೆಯಲ್ಲಿ ಮಂಗಳವಾರ ಬಿ ಖಾತಾ ಆಸ್ತಿಗೆ ಎ ಖಾತಾ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆಯ ಅಧ್ಯಕ್ಷ ಯು.ಆಂಜನೇಯಲು, ಪದಾಧಿಕಾರಿಗಳಾದ ಉಮಾಮಹೇಶ್ವರ್, ಎ.ಪಂಪಣ್ಣ, ನಾಗಲಿಂಗಪ್ಪ, ಶಂಕ್ರಪ್ಪ, ರಾಮಲಿ ಇತರರಿದ್ದರು.
ಹೊಸಪೇಟೆಯಲ್ಲಿ ಮಂಗಳವಾರ ಬಿ ಖಾತಾ ಆಸ್ತಿಗೆ ಎ ಖಾತಾ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆಯ ಅಧ್ಯಕ್ಷ ಯು.ಆಂಜನೇಯಲು, ಪದಾಧಿಕಾರಿಗಳಾದ ಉಮಾಮಹೇಶ್ವರ್, ಎ.ಪಂಪಣ್ಣ, ನಾಗಲಿಂಗಪ್ಪ, ಶಂಕ್ರಪ್ಪ, ರಾಮಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಜಾ ಜಾಗೃತಿ ವೇದಿಕೆಯಿಂದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿಗೆ ಮನವಿ
ಹೊಸಪೇಟೆ: ಬಿ ಖಾತಾ ಆಸ್ತಿಗೆ ಎ ಖಾತಾ ನೀಡುವಂತೆ ಒತ್ತಾಯಿಸಿ ಪ್ರಜಾ ಜಾಗೃತಿ ವೇದಿಕೆ ಜಿಲ್ಲಾ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರ ಮೂಲಕ ಮುಖ್ಯಮಂತ್ರಿ ಮನವಿ ರವಾನಿಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್ ಮಾತನಾಡಿ, ರಾಜ್ಯ ಸರ್ಕಾರ ಕಳೆದ ವರ್ಷ ಏಪ್ರೀಲ್-ಮೇ ತಿಂಗಳಲ್ಲಿ ರಾಜ್ಯಾಧ್ಯಂತ ನಗರ ಪ್ರದೇಶದ ಅನಧಿಕೃತ ಬಡಾವಣೆ ನಿವಾಸಿಗಳಿಗೆ ಬಿ-ಖಾತೆ ನೀಡಿದೆ. ಇದರಿಂದ ಜಿಲ್ಲಾಧಿಕಾರಿಗಳಿಂದ ಭೂ-ಪರಿವರ್ತನೆಯಾಗದ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಇಲ್ಲದೆ, ಕಂದಾಯ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವೇಶನ ಹೊಂದಿರುವ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ. ಆದರೆ ಸರ್ಕಾರದ ಈ ಕ್ರಮ ಬಿ-ಖಾತಾದಾರರಿಗೆ ಪೂರ್ಣ ಪ್ರಮಾಣದಲ್ಲಿ ಪ್ರಯೋಜನವಾಗುತ್ತಿಲ್ಲ. ಏಕೆಂದರೆ ಬಿ-ಖಾತಾ ದಾಖಲೆ ಅಷ್ಠೇನು ಸುರಕ್ಷಿತ ಹಾಗೂ ಕಾನೂನು ಬದ್ಧವಾಗಿಲ್ಲ ಎಂಬ ಅಭಿಪ್ರಾಯವಿದೆ. ಅಲ್ಲದೇ ಬಿ-ಖಾತಾ ಆಸ್ತಿಯ ಮಾಲೀಕರು ತಮ್ಮ ಮಕ್ಕಳ ಮದುವೆ, ಶಿಕ್ಷಣ, ತುರ್ತು ವೈಧ್ಯಕೀಯ ಚಿಕಿತ್ಸೆ ಪಡೆಯಲು, ಹಾಗೂ ಸರ್ಕಾರದಿಂದ ಸೌಲಭ್ಯ ಪಡೆಯಲು ಕೆಲವು ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ.
ಸರ್ಕಾರ ಈ ಸಮಸ್ಯೆಯನ್ನು ತೀವ್ರವಾಗಿ ಪರಿಗಣಿಸಿ 6 ತಿಂಗಳ ಹಿಂದೆಯೇ ಬಿ-ಖಾತಾ ಮಾಲೀಕರಿಗೆ ಎ-ಖಾತಾ ದಾಖಲೆ ನೀಡಲು ತೀರ್ಮಾನಿಸಿದ್ದರೂ, ಈ ವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಬಿ-ಖಾತಾ ಮಾಲೀಕರಿಗೆ ವಿಪರೀತ ತೊಂದರೆಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬಿ-ಖಾತಾ ಆಸ್ತಿ ಮಾಲೀಕರಿಗೆ ಹೆಚ್ಚು ಸುರಕ್ಷಿತ ಹಾಗೂ ಅಧಿಕೃತ ಹಾಗೂ ಕಾನೂನು ಬದ್ದ ಎ-ಖಾತಾ ನೀಡಲು ಒತ್ತಾಯಿಸಿದರು.
ವೇದಿಕೆಯ ಅಧ್ಯಕ್ಷ ಯು.ಆಂಜನೇಯಲು, ಪದಾಧಿಕಾರಿಗಳಾದ ಉಮಾಮಹೇಶ್ವರ್, ಎ.ಪಂಪಣ್ಣ, ನಾಗಲಿಂಗಪ್ಪ, ಶಂಕ್ರಪ್ಪ, ರಾಮಲಿ, ಕೆ.ಎಸ್.ಹಳ್ಳೂರ್, ಕೆ.ಎಂ.ಕೊಟ್ರಯ್ಯ, ಐಲಿಸಿದ್ದಣ್ಣ, ವಿರುಪಾಕ್ಷಪ್ಪ, ಎಸ್.ಎಂ.ಬಾಷ, ನಜೀರ್‌ಅಹ್ಮದ್, ಈ.ಪ್ರಶಾಂತ್, ಎಸ್.ತಿಪ್ಪೇಸ್ವಾಮಿ, ನೀಲಕಂಠಪ್ಪ, ಡಾ.ಲಕ್ಷö್ಮಣ, ಎಂ.ರಾಜಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net