ಸಂಘದ ಜಿಲ್ಲಾಧ್ಯಕ್ಷ ಟಿ.ನಾಗರಾಜ್ ಮಾತನಾಡಿ, ಖಾಸಗಿ ಪವರ್ ಕಂಪನಿಗೆ ಪರವಾನಿಗೆ ನೀಡುವುದು ರೈತರ ಪಂಪ್‌ಸೆಟ್‌ಗಳಿಗೆ ಮಾರಕವಾಗಲಿದ್ದು, ಗೃಹ ಬಳಕೆಯ ಗ್ರಾಹಕರಿಗೂ ಹೊರೆಯಾಗಲಿದೆ. ಅಲ್ಲದೆ, ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಲಿದ್ದು, ಮೀಸಲಾತಿ ವ್ಯವಸ್ಥೆಗೂ ತೊಂದರೆಯುAಟಾಗಲಿದೆ. ಒಂದು ವೇಳೆ ಜಿಲ್ಲಾ ಉಪಾಧ್ಯಕ್ಷರಾದ ಆರ್.ಆರ್. ತಾಯಪ್ಪ, ಪ್ರಮುಖರಾದ ದೊಡ್ಡ ಗಾಳೆಪ್ಪ, ರೇವಣ ಸಿದ್ದಪ್ಪ, ಕೆ. ಮೂರ್ತಿ ಹಿಂದೆ ಸರಿಯದಿದ್ದರೆ, ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡುವುದರ ಜತೆಗೆ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ‘ಬಾರು ಕೋಲು ಚಳುವಳಿ’ ನಡೆಸಲಾಗುವುದು ಎಂದು ಎಚ್ಚರಿಸಿದೆ.