ಸರ್ಕಾರಕ್ಕೆ ಹೇಳಲು ಪದಗಳಿಲ್ಲ

ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ವಿವಿಗೆ ಅನುದಾನ ಬಾರದ ಹಿನ್ನೆಲೆಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ

ಹೊಸಪೇಟೆ: ಕನ್ನಡ ವಿವಿ ಜಾಗತೀಕ ಜ್ಞಾನವನ್ನು ಭಾಷೆ ಮೂಲಕ ನೀಡುವ ಬಹು ದೊಡ್ಡ ವಿಶ್ವವಿದ್ಯಾಲಯವಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಕನ್ನಡ ವಿವಿಯಲ್ಲಿ ಮಂಗಳವಾರ ನಡೆದ ಪುಸ್ತಕ ಬಿಡುಗಡೆÀ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಧಾನವಾಗಿ ಕನ್ನಡ ಸಂಶೋಧನೆಯನ್ನು ಇಟ್ಟುಕೊಂಡಿರುವ ವಿವಿ ಇದಕ್ಕೆ ಅನುಕೂಲ ಆಗುವಂತೆ ಭೋಧನೆ ಕೂಡ ಮಾಡುತ್ತಿದೆ. ಬೇರೆ ವಿವಿ ಹೊಲಿಸಿದರೆ, ಕನ್ನಡ ವಿವಿಗೆ ಆದಾಯ ಕಡಿಮೆ. ಇಂತಹ ವಿವಿಗೆ ಅನುದಾನ ನೀಡದ ಸರ್ಕಾರಕ್ಕೆ ಹೇಳುವ ಯಾವ ಪದಗಳು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯ, ಜಾನಪದ ಮಾತ್ರವಲ್ಲ ಜಾಗತೀಕ ಜ್ಞಾನವನ್ನು ಕನ್ನಡ ಮುಖಂತರ ಪರಿಸಯಿಸುವ ವಿವಿಗೆ ಅನುಧಾನ ಕೊರೆತೆ ಮಾಡಿರುವುದು ಶೋಚನೀಯ ಸಂಗತಿ. ಕನ್ನಡದ ಪದವನ್ನು ನವೆಂಬರ್ ತಿಂಗಳಲ್ಲಿ ನಾವು ಹೇಳಿದಷ್ಟು ಬೇರೆ ಯಾವ ರಾಜ್ಯದವರು ಗಟ್ಟಿಯಾಗಿ ಹೇಳಲ್ಲ. ಕೆಲ ಕನ್ನಡ ಕಟ್ಟುವೆವು ಎನ್ನುವವರಿಗೆ 11 ತಿಂಗಳ ನಿದ್ರೆಗೆ ಜಾರಿ, ನವೆಂಬರ್ ತಿಂಗಳಲ್ಲಿ ಎಚ್ಚರವಾಗುತ್ತದೆ. .01ಕ್ಕೆ ಹುಟ್ಟಿ, .31ಕ್ಕೆ ಮಾಯ ಆಗುವವರಿಗೆ ನವೆಂಬರ್ ನಾಯಕರು ಎಂದು ಹೇಳಬಹುದು. ಇಂತಹವರಿಗೆ ಬೆಲೆ ಕೊಡುವುದಕ್ಕಿಂತ ಕನ್ನಡ ಭಾಷೆಗಾಗಿ ಇರುವ ವಿವಿಗೆ ಅನುದಾನ ಸಿಗಲಿ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net