ಅನ್ನ ನೀಡುವ ರೈತರೇ ಈ ನಾಡಿನ ದೈವ

ಹೊಸಪೇಟೆಯಲ್ಲಿ ರೈತರ ದಿನಾಚರಣೆ ನಿಮಿತ್ತ ಬೃಹತ್ ಮೆರವಣಿಗೆ ನಡೆಯಿತು.
ಹೊಸಪೇಟೆಯಲ್ಲಿ ರೈತರ ದಿನಾಚರಣೆ ನಿಮಿತ್ತ ಬೃಹತ್ ಮೆರವಣಿಗೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರೈತರ ಸಮಾವೇಶದಲ್ಲಿ ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಅಭಿಪ್ರಾಯ
ಹೊಸಪೇಟೆ: ಅನ್ನದಾತರ ಸಮಸ್ಯೆಗಳಿಗೆ ಪ್ರತಿಯೊಬ್ಬರು ಸ್ಪಂದಿಸಬೇಕು. ಬೆಂಬಲ ಬೆಲೆ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹುಡಾ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣದಿಂದ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರ ದಿನಾಚರಣೆ ನಿಮಿತ್ತ ವಿಜಯನಗರ ಜಿಲ್ಲಾ ಮೂರನೇ ವರ್ಷದ ರೈತರ ಸಮಾವೇಶದಲ್ಲಿ ಮಾತನಾಡಿದರು.
ಭಾರತದ ಬೆನ್ನುಲುಬು ರೈತರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಾವು ತಿನ್ನುವ ದವಸ, ಧಾನ್ಯಗಳು, ಹಣ್ಣು, ತರಕಾರಿ, ಹೈನುಗಾರಿಕಾ ಉತ್ಪನ್ನಗಳನ್ನೆಲ್ಲ ಉತ್ಪಾದಿಸುವುದು ಈ ರೈತರೆ ಎಂಬುದನ್ನು ಮರೆಯಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ರೈತರಿಗೆ ಬಹಳಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಆ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಗರಗನಾಗಲಾಪುರದ ಒಪ್ಪತ್ತೇಶ್ವರ ಮಠದ ಶ್ರೀನಿರಂಜನಪ್ರಭು ದೇಶಿಕರು ಸಾನ್ನಿಧ್ಯವಹಿಸಿದ್ದರು. ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಸಿ.ಎ.ಗಾಳೆಪ್ಪ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ರಾಣಿ ಸಂಯುಕ್ತ, ಪ್ರಮುಖರಾದ ವಸಂತಕುಮಾರ್, ವೆಂಕಟೇಶ ಇತರರಿದ್ದರು.
ಅದಕ್ಕೂ ಮುನ್ನ ನಗರದ ವಡಕರಾಯ ದೇಗುಲದ ಬಳಿ ನೇಗಿಲು ಪೂಜೆ ಮಾಡುವ ಮೂಲಕ ರೈತ ಸಮಾವೇಶ ನಿಮಿತ್ತ ಹಮ್ಮಿಕೊಂಡಿದ್ದ ಭವ್ಯ ಮೆರವಣಿಗೆಗೆ ಎಸ್ಪಿ ಎಸ್. ಜಾಹ್ನವಿ ಚಾಲನೆ ನೀಡಿದರು. ಡಿವೈಎಸ್ಪಿ ಡಾ. ಮಂಜುನಾಥ ತಳವಾರ, ಹುಡಾ ಅಧ್ಯಕ್ಷ ಇಮಾಮ್ ಇದ್ದರು. ನಗರದ ಮೇನ್ ಬಜಾರ್, ಪಾದಗಟ್ಟೆ ಆಂಜನೇಯ ದೇಗುಲ, ದರ್ಗಾ ಮಸೀದಿ, ಅಂಬೇಡ್ಕರ್ ವೃತ್ತ, ಕಾಲೇಜ್ ರಸ್ತೆ ಮೂಲಕ ಸಾಗಿ ಬಂದಿತು. 101 ಕಳಸಗಳನ್ನು ಹೊತ್ತ ಯುವತಿಯರು ಮೆರವಣಿಗೆಯಲ್ಲಿ ಸಾಗಿದರು. 21 ಜೋಡಿ ಎತ್ತಿನ ಬಂಡಿ, ಡೊಳ್ಳು, ಕೋಲಾಟ, ಭಜನೆ, ವಿವಿಧ ಕಲಾ ಸಾಂಸ್ಕೃತಿಕ ಜಾನಪದ ತಂಡದ ಜೊತೆಗೆ ಸಂಭ್ರಮಾಚರಣೆಯೊAದಿಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ತಲುಪಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net