

ಪ್ರಮುಖ ಮುಖ್ಯಾಂಶಗಳು
ತುಂಗಾ ಜಲಾಶಯದಿಂದ ಬಾರಿ ಒಳಹರಿವು ಬರುತ್ತಿದೆ ಎಂದು ಮಾಹಿತಿ ಇದೆ. ಈ ಹಿಂದೆ ಕುಡಿಯಲು ಮಾತ್ರ ಎಂದು ಸರ್ಕಾರದ ಆದೇಶ ಇದೆ. ಮುಂದಿನ ಸೂಚನೆ ನಂತರ ಮಾಹಿತಿ ನೀಡಲಾಗುತ್ತದೆ.
— ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ, ವಿಜಯನಗರ
ಆಡಳಿತದ ನಿಯಮ ಏನೇ ಇರಲಿ, ಮಳೆರಾಯ ಕೃಪಾಕಟಾಕ್ಷ ತೋರಿದರೆ ನಮಗೆ ಬೇರೆ ಯಾವುದೇ ಅಭಯದ ಅಗತ್ಯವಿಲ್ಲ. ಈ ಬಾರಿ ನದಿಗೆ ಬಂದಿರುವ ನೀರು ನಮ್ಮ ಮೊದಲ ಬೆಳೆಯನ್ನು ಖಂಡಿತ ದಂಡೆಗೆ ತಲುಪಿಸಲಿದೆ.
— ಎಲ್.ಎಸ್.ರುದ್ರಪ್ಪ, ರೈತರ ಮುಖಂಡ, ಹೊಸಪೇಟೆ