ಹಂಪಿಗೆ ಹರಿದುಬಂದ ಪ್ರವಾಸಿಗರ ದಂಡು

ಹಂಪಿಯ ವಿಜಯವಿಠಲ ದೇಗುಲದಲ್ಲಿ ಕಲ್ಲಿನ ರಥ ನೋಡುತ್ತಿರುವ ಪ್ರವಾಸಿಗರು.
ಹಂಪಿಯ ವಿಜಯವಿಠಲ ದೇಗುಲದಲ್ಲಿ ಕಲ್ಲಿನ ರಥ ನೋಡುತ್ತಿರುವ ಪ್ರವಾಸಿಗರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಐತಿಹಾಸಿಕ ನಗರಿ ಹೌಸ್‌ಫುಲ್
ಹೊಸಪೇಟೆ: ಸತತ ಸಾಲು ಸಾಲು ರಜೆಗಳು ಬಂದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಗೆ ಪ್ರವಾಸಿಗರ ಮಹಾಪೂರವೇ ಹರಿದುಬಂದಿದೆ.
ವಾರಾAತ್ಯದ ರಜೆಯ ಜತೆಗೆ ಮೊಹರಂ ಕೊನೆದಿನದ ಸರ್ಕಾರಿ ರಜೆಗಳು ಒಟ್ಟಿಗೆ ಸಿಕ್ಕಿರುವುದರಿಂದ ರಾಜ್ಯದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ, ಹೊರರಾಜ್ಯ ಹಾಗೂ ವಿದೇಶಗಳಿಂದಲೂ ಸಾವಿರಾರು ಪ್ರವಾಸಿಗರು ಹಂಪಿಯತ್ತ ಹೆಜ್ಜೆ ಹಾಕಿದ್ದಾರೆ. ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಮುಗಿಬಿದ್ದ ಜನಾಂಗ ಹಂಪಿಯ ಪ್ರಮುಖ ಆಕರ್ಷಣೆಗಳಾದ ಶ್ರೀ ವಿರೂಪಾಕ್ಷೇಶ್ವರ ದೇಗುಲ, ಕಲ್ಲಿನ ರಥ, ವಿಜಯ ವಿಠ್ಠಲ ದೇಗುಲ, ಉಗ್ರ ನರಸಿಂಹ, ಸಾಸಿವೆಕಾಳು ಗಣಪತಿ, ಕಮಲ್ ಮಹಲ್ ಹಾಗೂ ಗಜಶಾಲೆಗಳ ಬಳಿ ಪ್ರವಾಸಿಗರ ದಂಡು ಕಂಡುಬAದಿದೆ. ಶುಕ್ರವಾರದಿಂದಲೇ ಪ್ರವಾಸಿಗರು ಸ್ಮಾರಕಗಳ ಮುಂದೆ ಸಾಲುಗಟ್ಟಿ ನಿಂತು ಟಿಕೆಟ್ ಖರೀದಿಸುತ್ತಿದ್ದ ದೃಶ್ಯಗಳು ಕಂಡುಬAದವು. ತುಂಗಭದ್ರಾ ನದಿಯಲ್ಲಿ ಜಲಕ್ರೀಡೆ ಆಡುವುದು ಮತ್ತು ಹರಿಗೋಲು (ಬುಟ್ಟಿ ದೋಣಿ) ಸವಾರಿಯನ್ನು ಸವಿಯಲು ಪ್ರವಾಸಿಗರು ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ.
ಪ್ರವಾಸಿಗರ ಸಂಖ್ಯೆ ದಿಢೀರ್‌ನೆ ಹೆಚ್ಚಾದ ಕಾರಣ ಹಂಪಿ, ಕಮಲಾಪುರ ಹಾಗೂ ಹೊಸಪೇಟೆ ನಗರದ ಬಹುತೇಕ ಹೋಟೆಲ್‌ಗಳು, ರೆಸಾರ್ಟ್ಗಳು ಮತ್ತು ಹೋಮ್‌ಸ್ಟೇಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಹಂಪಿಗೆ ಸಂಪರ್ಕಿಸುವ ಮುಖ್ಯ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ವಿಪರೀತವಾಗಿದ್ದು, ಪ್ರಮುಖ ವೃತ್ತಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರವಾಸಿಗರ ವಾಹನಗಳ ನಿಲುಗಡೆಗೆ ಹಂಪಿ ಇಲಾಖೆಯು ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿದ್ದರೂ, ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸವಾರರು ತುಸು ಪರದಾಡುವಂತಾಯಿತು.

ಸ್ಥಳೀಯ ವ್ಯಾಪಾರಿಗಳಲ್ಲಿ ಹರ್ಷ

ಕಳೆದ ಕೆಲವು ತಿಂಗಳುಗಳಿAದ ಕೊಂಚ ಮಂಕಾಗಿದ್ದ ಹಂಪಿಯ ಪ್ರವಾಸೋದ್ಯಮಕ್ಕೆ ಈ ಸಾಲು ಸಾಲು ರಜೆಗಳು ಹೊಸ ಚೈತನ್ಯ ನೀಡಿವೆ. ಗೈಡ್‌ಗಳು, ಆಟೋ ಚಾಲಕರು, ಹೋಟೆಲ್ ಮಾಲೀಕರು ಹಾಗೂ ಕರಕುಶಲ ವಸ್ತುಗಳ ಮಾರಾಟಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಬಹಳ ದಿನಗಳ ನಂತರ ಹಂಪಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದಾರೆ. ವ್ಯಾಪಾರ-ವಹಿವಾಟು ಚೆನ್ನಾಗಿ ನಡೆಯುತ್ತಿರುವುದು ಸಂತಸ ತಂದಿದೆ," ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮ

ಪ್ರವಾಸಿಗರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಪುರಾತತ್ವ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಹಂಪಿಯ ಪ್ರಮುಖ ವೃತ್ತಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ತುಂಗಭದ್ರಾ ನದಿಯ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಇಳಿಯದಂತೆ ಎಚ್ಚರಿಕೆ ವಹಿಸಲಾಗಿದೆ.
ಒಟ್ಟಾರೆಯಾಗಿ, ನಿರಂತರ ಕೆಲಸದ ಒತ್ತಡದಿಂದ ಬ್ರೇಕ್ ಬಯಸಿದ್ದ ಜನರಿಗೆ ಈ ಸಾಲು ಸಾಲು ರಜೆಗಳು ಹಂಪಿಯ ಶಿಲ್ಪಕಲೆಯ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶ ಒದಗಿಸಿಕೊಟ್ಟಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net