ಟಿಬಿಡ್ಯಾಂ ಗೇಟ್ ಸಚಿವರಿಂದ ತಪ್ಪು ಮಾಹಿತಿ

ಸಚಿವ ಜಮೀರ್ ಖಾನ್
ಸಚಿವ ಜಮೀರ್ ಖಾನ್
Published on

ಪ್ರಮುಖ ಮುಖ್ಯಾಂಶಗಳು

  • ಐದು ಗೇಟ್ ಪೂರ್ಣ ಎಂದ ಸಚಿವ ಜಮೀರ್ ಖಾನ್
ಹೊಸಪೇಟೆ: ತುಂಗಭದ್ರಾ ಜಲಾಶಯದ 33 ಗೇಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ವಕ್ಫ್, ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಕ್ರಸ್ಟ್ ಗೇಟ್ ಅಳವಡಿಕೆ ನೀಡಿದ 10 ಕೋಟಿ ರೂ. ರಾಜ್ಯ ಸರ್ಕಾರ ವಾಪಸ್ ಪಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ, ಯಾವುದೇ ರೀತಿಯಲ್ಲಿ ಅನುದಾನ ವಾಪಸ್ ಪಡೆದಿಲ್ಲ. ಒಟ್ಟು 33 ಗೇಟ್ ಗಳು ಇವೆ. ಅದರಲ್ಲಿ 18 ಗೇಟ್ ಆಂದ್ರಪ್ರದೇಶದ, 15 ಗೇಟ್ ಕರ್ನಾಟಕ ಪಾಲಿಗೆ ಬರುತ್ತೆ. ಆಂದ್ರಪ್ರದೇಶ 28 ಕೋಟಿ ರೂ. ಕೊಡಬೇಕು. ರಾಜ್ಯ ಸರ್ಕಾರ 26 ಕೋಟಿ ಕೊಡಬೇಕು. ಅದರಲ್ಲಿ 10 ಕೋಟಿ ಕೊಟ್ಟಿದೆ ಹೊರತು, ವಾಪಸು ಪಡೆಕೊಂಡಿಲ್ಲ. ನಮ್ಮ ಪಾಲಿಂದು ಏನಿದೆ ಅದನ್ನು ಕೊಡಲೇ ಬೇಕು ಎಂದರು.
ತುಂಗಭದ್ರಾ ಜಲಾಶಯಕ್ಕೆ ನಾನೇ ಹೋಗಿ ನೋಡಿ ಬಂದಿದ್ದೀನಿ ಐದು ಗೇಟ್ ಕಂಪ್ಲೀಟ್ ಅಗಿದೆ ಎಂದು ಸುದ್ದಿಗಾರರಿಗೆ ತಪ್ಪು ಮಾಹಿತಿ ನೀಡಿದರು. ಒಂದು ತಿಂಗಳಿಗೆ ಒಂದೇ ಗೇಟ್ ಪೂರ್ಣ ಆಗಿದೆ ಅಧಿಕಾರಿಗಳು ತಮಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ಕೊಡದೇ ಹೋದ ಸಚಿವ ಜಮೀರ್ ಮರಳಿ ಹೋದರು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net