ಹೊಸಪೇಟೆಯಲ್ಲಿ ಜಾಗೃತ ನಾಯಕ ಬಳಗದಿಂದ ಶುಕ್ರವಾರ ಡಿಎಚ್.ಒ ಕಚೇರಿಯ ಆರೋಗ್ಯಧಿಕಾರಿ ಶ್ರೀಧರ ಅವರಿಗೆ ಮನವಿ ಸಲ್ಲಿಸಲಾಯಿತು. ಜಾಗೃತ ನಾಯಕ ಬಳಗದ ಅಧ್ಯಕ್ಷ ಬಿ.ಜನಾರ್ಧನ್, ಕಾರ್ಯದರ್ಶಿ ಟಿ ಫಕೀರಪ್ಪ, ಗೌರವಾಧ್ಯಕ್ಷ ಪೂಜಾರಿ ದುರ್ಗಪ್ಪ ಇತರರಿದ್ದರು.
ಹೊಸಪೇಟೆ: ಇಲ್ಲಿನ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕರ್ತವ್ಯಲೋಪ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಸಂಭವಿಸಿದ ನವಜಾತ ಶಿಶುವಿನ ಸಾವಿನ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಇಂತಹ ದುರಂತಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಾಗೃತ ನಾಯಕ ಬಳಗದಿಂದ ನಗರದಲ್ಲಿ ಶುಕ್ರವಾರ ಡಿಎಚ್.ಒ ಕಚೇರಿಯ ಆರೋಗ್ಯಧಿಕಾರಿ ಶ್ರೀಧರ ಅವರಿಗೆ ಮನವಿ ಸಲ್ಲಿಸಿದೆ.
ವಿಜಯನಗರ ಜಿಲ್ಲಾ ಕೇಂದ್ರವಾಗಿರುವ ನಗರದ ತಾಯಿ-ಮಕ್ಕಳ ಆಸ್ಪತ್ರೆಯು ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ಸೇವೆಗೆ ಪ್ರಮುಖ ಆಶಾಕಿರಣವಾಗಿದೆ. ಆದರೆ, ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಮತ್ತು ಕೆಲ ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಪದೇಪದೆ ಇಂತಹ ಕಹಿ ಘಟನೆಗಳು ನಡೆಯುತ್ತಿರುವುದು ತೀವ್ರ ಖಂಡನೀಯ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬAಧಿಸಿದAತೆ ನಿರ್ಲಕ್ಷ್ಯ ತೋರಿದ ವೈದ್ಯರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಹಿರಿಯ ಅಧಿಕಾರಿಗಳು ಕೈಗೊಂಡ ಕ್ರಮವನ್ನು ಸ್ವಾಗತಿಸಿರುವ ಬಳಗವು, ಆಸ್ಪತ್ರೆಗೆ ತುರ್ತಾಗಿ ಅಗತ್ಯವಿರುವ ನುರಿತ ತಜ್ಞ ವೈದ್ಯರನ್ನು ಹಾಗೂ ಪೂರಕ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದೆ. ಜತೆಗೆ, ಕರ್ತವ್ಯದಲ್ಲಿ ದಕ್ಷತೆ ತರುವ ಮೂಲಕ ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದೆ.
ಜಾಗೃತ ನಾಯಕ ಬಳಗದ ಅಧ್ಯಕ್ಷ ಬಿ.ಜನಾರ್ಧನ್, ಕಾರ್ಯದರ್ಶಿ ಟಿ ಫಕೀರಪ್ಪ, ಗೌರವಾಧ್ಯಕ್ಷ ಪೂಜಾರಿ ದುರ್ಗಪ್ಪ, ಪ್ರಮುಖರಾದ ಬಿ.ಮಾರುತಿ, ಶಶಿಧರಯ್ಯ ಸ್ವಾಮಿ, ತಾರಿಹಳ್ಳಿ ಶ್ರೀನಿವಾಸ, ಪೂಜಾರಿ ವೆಂಕೋಬ ನಾಯಕ, ಆಂಜನೇಯ, ಕೆ.ಮಂಜುನಾಥ, ಜಂಬಾನಳ್ಳಿ ಸಂದೀಪ. ಮರಡಿ.ಮಂಜುನಾಥ