ದರ್ಪಪ ತೋರಿದ ಎಎಸ್‌ಐಗೆ ಅಮಾನತು ಮಾಡಿ

ಹೊಸಪೇಟೆಯಲ್ಲಿ ಸಂಚಾರಿ ಪೊಲೀಸ್ ಠಾಣೆಯ ಪಿಐ ಹುಲಗಪ್ಪ ಅವರಿಗೆ ಡಿವೈಎಫ್‌ಐ ಸಂಘಟನೆಯಿAದ ಮನವಿ ಸಲ್ಲಿಸಲಾಯಿತು. ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ವಿ.ಸ್ವಾಮಿ, ಈಡಿಗರ ಮಂಜುನಾಥ, ಉಪಾಧ್ಯಕ್ಷ ಬಂಡೆ ತಿರುಪಪ್ಪ, ಅಲಾಫ್, ಪ್ರಮುಖರಾದ ಭಾಸ್ಕರ್‌ರೆಡ್ಡಿ, ನಾಗರತ್ನ, ಕೆ.ಎ. ಪವನ್ ಕುಮಾರ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಫ್‌ಐ ಸಂಘಟನೆಯಿAದ ಪಿಐ ಹುಲಗಪ್ಪಗೆ ಮನವಿ
ಹೊಸಪೇಟೆ: ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಎಎಸ್‌ಐ ಗಂಡಿ ಮಲಿಯಪ್ಪಗೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ಸಂಘಟನೆಯಿAದ ನಗರದ ಸಂಚಾರಿ ಪೊಲೀಸ್ ಠಾಣೆಯ ಪಿಐ ಹುಲಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಡಿವೈಎಫ್‌ಐ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದಿರ್ಶಿ ಈಡಿಗರ ಮಂಜುನಾಥ ತನ್ನ ಮಗನ ಜತೆ ಬಳ್ಳಾರಿ ರಸ್ತೆಯಲ್ಲಿರುವ ದರ್ಗಾ ಮುಂದೆ ಭಾನುವಾರ ಸಂಜೆ ಬೈಕ್ ನಲ್ಲಿ ಹೋಗುತ್ತಿರುವಾಗ, ಮತ್ತೋರ್ವ ಬೈಕ್ ಸವಾರ ವೇಗವಾಗಿ ಬರುತ್ತಿರುವುದನ್ನು ನೋಡಿ, ಮಂಜುನಾಥ ರಸ್ತೆ ಪಕ್ಕದಲ್ಲಿ ಸಾಗಿದನು. ಈ ವೇಳೆ ಟ್ರಾಫಿಕ್ ಪೊಲೀಸ್ ಗಂಡಿ ಮಲಿಯಪ್ಪ ರವರ ಬೈಕ್‌ಗೆ ಮಂಜುನಾಥ ಮಗನ ಕೈಗೆ ತಾಕಿತು. ಇದರಿಂದ ಎಎಸ್‌ಐ ಮಲಿಯಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಸಂಘಟಕ ಮಂಜುನಾಥ ನೋಡಿಕೊಂಡು ಮಾತಾಡಿ ಎಂದಾಗ, ಅಧಿಕಾರದ ದರ್ಪ ತೋರಿಸಿದರು. ಸಾರ್ವಜನಿಕ ವೃತ್ತಿಯಲ್ಲಿ ಇರುವ ಇವರು ಅಸಭ್ಯವಾಗಿ ವರ್ತಿಸಿದ್ದಾರೆ. ಆದ್ದರಿಂದ ಎಎಸ್‌ಐ ಮಲಿಯಪ್ಪ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net