ಲಂಚ ಪಡೆದ ಸರ್ವೇಯರ್ ಲೋಕಾಯುಕ್ತ ಬಲೆಗೆ

ಕೊಟ್ರೇಶ್ ನಾಯ್ಕ
ಕೊಟ್ರೇಶ್ ನಾಯ್ಕ
Published on
ಹಗರಿಬೊಮ್ಮನಹಳ್ಳಿ (ವಿಜಯನಗರ): ಜಮೀಮಿನ‌ ಹದ್ದುಬಸ್ತು‌ ಮಾಡಲು ಲಂಚ ಪಡೆದ ಸರ್ವೇಯರ್ ಕೊಟ್ರೇಶ್ ನಾಯ್ಕನನ್ನು ನಗರದ ಲೋಕಾಯುಕ್ತಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ತಾಲೂಕಿನ‌ ವರದಾಪುರ ಗ್ರಾಮದ ಹುಳ್ಳಿ ದೇವೇಂದ್ರಪ್ಪ ಎನ್ನುವವರ ಜಮೀಮಿನ‌ಲ್ಲಿ 2024ರಿಂದ ಹದ್ದುಬಸ್ತು‌ ಸರ್ವೇ ಮಾಡಲು ವಿಳಂಬ ಮಾಡಿದರು. ಆಗ 10 ಸಾವಿರ ರೂ. ನೀಡಿದರೂ ವಿಳಂಬ ಮಾಡಿದ್ದಾರೆ. ಮತ್ತೆ 30 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರಿಂದ ರೈತ ದೇವೇಂದ್ರಪ್ಪ 30 ಸಾವಿರ ರೂ. ನೀಡಿದ್ದಾರೆ.
ಈ ವೇಳೆ ಖಚಿತ ಮಾಹಿತಿಯೊಂದಿಗೆ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್.ಛಲವಾದಿ ಮಾರ್ಗದರ್ಶನದಲ್ಲಿ ಪಿಐ ರಾಜೇಶ ಎಸ್.ಲಮಾಣಿ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಹರಪನಹಳ್ಳಿಯ ನಂದಿಬೇವೂರು ತಾಂಡಾದಲ್ಲಿ ಬಂಧಿಸಿದ್ದಾರೆ. ಪಿಐ ಅಮರೇಶ್, ಸಿಬ್ಬಂದಿ ಸುರೇಶ, ಶ್ರೀನಿವಾಸ, ರೇಣುಕಪ್ಪ. ಕುಮಾರ ನಾಯ್ಕ, ಚನ್ನಬಸಪ್ಪ, ಕೃಷ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net