

ಪ್ರಮುಖ ಮುಖ್ಯಾಂಶಗಳು
ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳು ಬಳಲಬಾರದು ಎಂದು ಮೃಗಾಲಯದಲ್ಲಿ ಹಿತಕರ ನೈಸರ್ಗಿಕ ವಾತಾವರಣ ಸೃಷ್ಟಿಸಲಾಗಿದೆ. ಬೇಸಿಗೆಯಲ್ಲೂ ಪ್ರಾಣಿಗಳನ್ನು ಕ್ರಿಯಾಶೀಲತೆಯಿಂದ ಇರಿಸಲು ಸ್ಪ್ರಿಂಕ್ಲರ್, ಫಾಗರ್ಸ್ ನೀರಿನ ವ್ಯವಸ್ಥೆ, ಜತೆಗೆ ಎಳನೀರು, ನೀರಿನ ಅಂಶ ಇರುವ ಹಣ್ಣುಗಳನ್ನು ಒದಗಿಸಲಾಗುತ್ತಿದೆ. ಪ್ರವಾಸಿಗರಿಗೂ ತಂಪಾಗಿರಲು ಫಾಗರ್ಸ್ ನಿರ್ಮಾಣ ಮಾಡಲಾಗಿದೆ.