ವಿದ್ಯುತ್ ತಗುಲಿ ಕಬ್ಬು ನಾಶ

ಹೂವಿನಹಡಗಲಿ ತಾಲೂಕಿನ ಕೊಂಬಳಿ ಗ್ರಾಮದಲ್ಲಿ ರೈತ ನೀಲಕಂಠಪ್ಪ ಅಕ್ಕಿ ಅವರ ಕಬ್ಬಿನ ಗದ್ದೆಗೆ ಬೆಂಕಿ ಹತ್ತಿರುವುದು.
ಹೂವಿನಹಡಗಲಿ ತಾಲೂಕಿನ ಕೊಂಬಳಿ ಗ್ರಾಮದಲ್ಲಿ ರೈತ ನೀಲಕಂಠಪ್ಪ ಅಕ್ಕಿ ಅವರ ಕಬ್ಬಿನ ಗದ್ದೆಗೆ ಬೆಂಕಿ ಹತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹೂವಿನಹಡಗಲಿಯಲ್ಲಿ ಎರಡು ಎಕರೆ ಕಬ್ಬಿನ ಬೆಳೆ ನಾಶ

ಹೂವಿನಹಡಗಲಿ : ವಿದ್ಯುತ್ ಕಿಡಿ ತಗುಲಿ ಎರಡು ಎಕರೆ ಕಬ್ಬಿನ ಬೆಳೆ ನಾಶವಾದ ಘಟನೆ ತಾಲೂಕಿನ ಕೊಂಬಳಿಯಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ರೈತ ನೀಲಕಂಠಪ್ಪ ಅಕ್ಕಿ ಅವರ ಕಬ್ಬಿನ ಬೆಳೆ ನಾಶವಾಗಿದೆ. ವಿದ್ಯುತ್ ಕಂಬದಲ್ಲಿನ ತಂತಿಗಳು ತಗುಲಿ ಬೆಂಕಿಯ ಕಿಡಿ ಕಬ್ಬಿಗೆ ತಾಗಿದೆ. ಇದರಿಂದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿರುವುದರಿಂದ ಬೆಳೆ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net