ಪಟ್ಟಣದ ಉಜ್ಜಿನಿ ಸರ್ಕಲ್ ನಲ್ಲಿರುವ ಫಕೀರ ಸ್ವಾಮಿ ದೇವಸ್ಥಾನ ಮುಂಭಾಗ ಗುರುವಾರ ಸಂಜೆ ಅಗ್ನಿ ಕುಂಡಕ್ಕೆ ಅಗ್ನಿ ಸ್ಪರ್ಶಿಸಿ ಹಬ್ಬದ ಸಂಭ್ರಮೋತ್ಸವಕ್ಕೆ ಚಾಲನೆ ನೀಡಲಾಯಿತು. ಅಗ್ನಿ ಕುಣಿಗೆ ಚಾಲನೆ ದೊರೆಯುತ್ತಿದ್ದಂತೆ ಹಿಂದೂ, ಮುಸ್ಲಿಂ ಎನ್ನದೆ ಸರ್ವರು ಶ್ರದ್ಧಾಭಕ್ತಿಯಿಂದ ಸರತಿ ಸಾಲಿನಲ್ಲಿ ನಿಂತು ಫಕೀರ ಸ್ವಾಮಿಗೆ ಸಕ್ಕರೆ, ಬೆಲ್ಲ ಸಮರ್ಪಿಸಿ ಭಕ್ತಿ ಸಲ್ಲಿಸಿದರು.