ಸಾರಿಗೆ ಹೊರಗುತ್ತಿಗೆ ಚಾಲಕರಿಂದ ದಿಢೀರ್ ಮುಷ್ಕರ

ಹೂವಿನಹಡಗಲಿ ಸಾರಿಗೆ ಘಟಕದ ಹೊರಗುತ್ತಿಗೆ ಚಾಲಕರು ಮಂಗಳವಾರ ದಿಢೀರ್ ಮುಷ್ಕರ ನಡೆಸಿದರು.
ಹೂವಿನಹಡಗಲಿ ಸಾರಿಗೆ ಘಟಕದ ಹೊರಗುತ್ತಿಗೆ ಚಾಲಕರು ಮಂಗಳವಾರ ದಿಢೀರ್ ಮುಷ್ಕರ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕಿನಲ್ಲಿ ಗ್ರಾಮೀಣ ಸೇವೆಗಳು ಸ್ಥಗಿತ
  • ಪಿಯುಸಿ ಪರೀಕ್ಷೆಗೆ ಹಾಜರಾಗುವು ವಿದ್ಯಾರ್ಥಿಗಳಿಗೆ ತೊಂದರೆ
ಹೂವಿನಹಡಗಲಿ : ಇಲ್ಲಿನ ಕೆಕೆ‌ಆರ್‌ಟಿಸಿ ಸಾರಿಗೆ ಘಟಕದ ಹೊರಗುತ್ತಿಗೆ ಚಾಲಕರಿಗೆ ವೇತನ ನೀಡುವಂತೆ ಒತ್ತಾಯಿಸಿ ಮಂಗಳವಾರ ಬೆಳಿಗ್ಗೆಯಿಂದಲೇ ಬಸ್ ಓಡಿಸದೆ ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಸಾರಿಗೆ ಘಟಕದಲ್ಲಿ ಹೊರಗುತ್ತಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದೇವೆ. ಗುತ್ತಿಗೆ ಪಡೆದ ಗುತ್ತಿಗೆದಾರರು, ಇಲಾಖೆಯವರು ವೇತನ ನೀಡುತ್ತಿಲ್ಲ. ನಮ್ಮಿಂದಲೇ ಆರಂಭದಲ್ಲಿ 30 ಸಾವಿರ ರೂ. ಠೇವಣಿ ಪಡೆದಿದ್ದಾರೆ. ನಾವು ವೇತನದಲ್ಲಿ ಪಿಎಫ್, ಇಎಸ್‌ಐ ಹಾಗೂ ಇತರೆ ಸೇರಿ 2800 ರೂ. ಕಡಿತಗೊಳಿಸುತ್ತಿದ್ದಾರೆ. ಇದರಿಂದ ನಮಗೆ ಇಎಸ್‌ಐ ಸೌಲಭ್ಯವಾಗಲಿ ಪಿಎಫ್ ಸೌಲಭ್ಯವಾಗಲಿ ದೊರೆಯುತ್ತಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು ಕಳೆದ ಮೂರು ತಿಂಗಳಿಂದಲೂ ನಮ್ಮ ಮನವೊಲಿಸಿ ಕರ್ತವ್ಯಕ್ಕೆ ಹಾಜರು ಪಡಿಸಿದ್ದಾರೆ. ಆದರೆ ನಮ್ಮ ಸಮಸ್ಯೆಗಳನ್ನು ಯಾರೂ ಪರಿಹರಿಸುತ್ತಿಲ್ಲ. ಮೈಲಾರ ಜಾತ್ರೆ, ಕೊಟ್ಟೂರು ಜಾತ್ರೆ, ಪಿಯುಸಿ ಪರೀಕ್ಷೆ ಇದಾವೆ ಎಂದು ನಮ್ಮ ಮುಷ್ಕರವನ್ನು ಹತ್ತಿಕ್ಕಿದರು. ಈ ಸಮಸ್ಯೆಯನ್ನು ಯಾರೂ ಪರಿಹರಿಸುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಟೆಂಡರ್ ಪಡೆದದವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇಲ್ಲಿವರೆಗೂ ನಮ್ಮಿಂದ ಸೇವೆ ಮಾಡಿಸಿಕೊಂಡ ನಮ್ಮವರೇ ಹೀಗೆಂದರೆ ನಮ್ಮ ಸಮಸ್ಯೆ ಪರಿಹರಿಸುವವರು ಯಾರು? ವೇತನ ಇಲ್ಲದೆ ನಮ್ಮ ಜೀವನ ಬೀದಿಗೆ ಬರುತ್ತಿದೆ. ನಮ್ಮ ವೇತನ ನೀಡುವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಪಟ್ಟು ಹಿಡಿದರು.
ಮಂಗಳವಾರ ಬೆಳಿಗ್ಗೆಯಿಂದಲೇ ತಾಲೂಕಿನ ಸಾರಿಗೆ ಇಲಾಖೆಯಿಂದ ಗ್ರಾಮೀಣ ಸೌಲಭ್ಯಗಳು ಸ್ಥಗಿತವಾಗಿದ್ದು ತಾಲೂಕು ಕೇಂದ್ರದಲ್ಲಿ ಪಿಯುಸಿ ಅರ್ಥಶಾಸ್ತ್ರ ಪರೀಕ್ಷೆಗಳು ಜರುಗುತ್ತಿದ್ದು, ಪರೀಕ್ಷಾ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಹಾಜರಾಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ‌. ಇನ್ನು ಸಾರ್ವಜನಿಕರು ಕೂಡ ಪರದಾಡಿದರು.
ಪ್ರಮುಖರಾದ ನವೀನ, ಆನಂದ, ನಾಗರಾಜ, ಶಶಿಕಿರಣ, ಹಾಲೇಸ್, ಕೊಟ್ರೇಶ, ಚನ್ನಮಲ್ಲಪ್ಪ, ಶೇಕ್ ಸಾಹೇಬ್, ಶರಣಪ್ಪ, ನಾಗರಾಜ, ವೀರೇಶ್, ಪ್ರಭು, ಪ್ರಶಾಂತ್, ನಾಗರಾಜ್ ಸಿ, ದುರುಗೇಶ್, ಕಳಕ ರಡ್ಡಿ, ಗುರುಬಸವರಾಜ, ನಾಗರಾಜ್ ಡಿ ಇ, ಕೊಟ್ರೇಶ್ ಬಡಿಗೇರ್, ಶರಪ್ಪ ಬಾರ್ಕಿ, ಪ್ರಶಾಂತ್ ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net