ತ್ರಿಶೂರ್ ನಿಂದ ರೈಲಿನಲ್ಲಿ ಹೊರಟು ಮಂಗಳೂರಿಗೆ ಬಂದಿದ್ದಾರೆ. ಅಲ್ಲಿಂದ ಸಂಜೆ 6 ಗಂಟೆಗೆ ಹೊರಟು ಚಿತ್ರದುರ್ಗ ಮಾರ್ಗವಾಗಿ ಹಂಪಿ ಕಡೆ ಹೊರಟಿದ್ದಾಗ ಬೆಳಿಗ್ಗೆ 5 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ತಾಲೂಕಿನ ಅಮ್ಮನಕೇರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್ ಬಿದ್ದ ರಭಸಕ್ಕೆ ಪ್ರಾಧ್ಯಾಪಕಿ ಲಕ್ಷ್ಮೀ ಕಾಲು ನಜ್ಜುಗುಜ್ಜಾಗಿದೆ. ಇನ್ನು ವಿದ್ಯಾರ್ಥಿಗಳಾದ ಅತುಲ್ಯ, ಅವನಿ, ಅತುಲ್,ಅಜೆಯ್ ರಾಜ್, ಅನುಗ್ರಹ ಅವರಿಗೆ ತೀವ್ರ ಗಾಯವಾಗಿದೆ. ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಗಾಗಿ ಬಳ್ಳಾರಿ ಬೀಮ್ಸ್‌ಗೆ ಕಳಿಸಲಾಗಿದೆ. ಕೂಡ್ಲಿಗಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.