ಕೊಟ್ಟೂರು: ಪಟ್ಟಣದ ವಿದ್ಯಾನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಮಕ್ಕಳು, ವೃದ್ಧರು ಭಯದಲ್ಲಿ ಓಡಾಡುವಂತಾಗಿದೆ.
ನಾಯಿಗಳು ಗುಂಪು ಗುಂಪಾಗಿರುವುದು, ಜಗಳವಾಡುವುದು ಜನರಲ್ಲಿ ಭಯ ಹೆಚ್ಚಿಸಿದೆ. ಜನರ ಮೇಲೆ ಏಕಾಏಕಿ ದಾಳಿ ಮಾಡುತ್ತವೆ ಎಂದು ನಿವಾಸಿಗಳ ಅಳಲಾಗಿದೆ. ಪಟ್ಟಣದ ವಾಲ ಕಟ್ಟಿ ಬಳಿ ಅನಸಿ ವೀರೇಶ ಅವರ ದನದ ಕೊಟ್ಟಿಗೆಯಲ್ಲಿದ್ದ ಎರಡು ಕುರಿಗಳನ್ನು ನಾಯಿಗಳ ಗುಂಪು ದಾಳಿ ನಡೆಸಿ ಗಾಯಗೊಳಿಸಿದೆ.
ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರಿಸುವ ಕಾರ್ಯ ನಡೆದಿದೆ. ಆದರೂ, ನಾಯಿಗಳು ಗುಂಪು ಗುಂಪಾಗಿ ಕಂಡುಬರುತ್ತಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. ಎಲ್ಲ ನಾಯಿಗಳನ್ನು ಸ್ಥಳಾಂತರಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.