ನಮ್ಮೂರಿಗೆ ಬಸ್ ನಿಲ್ಲಿಸಿ

ಹೊಸಪೇಟೆ ತಾಲೂಕಿನ ರಾಜಾಪುರದಲ್ಲಿ ಶುಕ್ರವಾರ ಬಸ್ ನಿಲುಗಡೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಾದ ಸವಿತಾ, ವಾಣಿ, ಸುಚಿತ್ರ, ಅಂಬಿಕಾ, ಮಂಜುಳ, ದುರ್ಗಮ್ಮ ಇತರರಿದ್ದರು.
ಹೊಸಪೇಟೆ ತಾಲೂಕಿನ ರಾಜಾಪುರದಲ್ಲಿ ಶುಕ್ರವಾರ ಬಸ್ ನಿಲುಗಡೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಾದ ಸವಿತಾ, ವಾಣಿ, ಸುಚಿತ್ರ, ಅಂಬಿಕಾ, ಮಂಜುಳ, ದುರ್ಗಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ತಡೆದು ದಿಢೀರ್ ವಿದ್ಯಾರ್ಥಿಗಳು ಪ್ರತಿಭಟನೆ
ಹೊಸಪೇಟೆ: ಶಾಲಾ, ಕಾಲೇಜು ಆರಂಭದ ಸಮಯಕ್ಕೆ ಅನುಗುಣವಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಹಾಗೂ ಬರುವ ಬಹಳಷ್ಟು ಬಸ್‌ಗಳು ನಾನ್ ಸ್ಟಾಪ್ ಎನ್ನುವ ಫಲಕ ಹಾಕಿಕೊಳ್ಳುತ್ತಿದ್ದು, ಇದನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ರಾಜಾಪುರದಲ್ಲಿ ಶುಕ್ರವಾರ ಎಸ್‌ಎಫ್‌ಐ ನೇತೃತ್ವದಲ್ಲಿ ರಸ್ತೆಯಲ್ಲಿ ಬಸ್‌ಗಳನ್ನು ತಡೆದು ದಿಢೀರ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿದಿನ ವಿದ್ಯಾರ್ಥಿಗಳು ಬಸ್‌ನಲ್ಲಿ ಜೋತು ಬಿದ್ದು ಸಾವಿನೊಂದಿಗೆ ಪ್ರಯಾಣ ಬೆಳೆಸುವ ಸ್ಥಿತಿ ನಿರ್ಮಾಣವಾಗಿದೆ. ಬಸ್‌ಗಳ ಕೊರತೆಯಿಂದ ಸರಿಯಾದ ಸಮಯಕ್ಕೆ ಶಾಲಾ, ಕಾಲೇಜಿಗೆ ಹೋಗಲಾಗದೆ ಅಲ್ಲಿಯೂ ಬೈಯಿಸಿಕೊಳ್ಳಬೇಕಾಗ ಸ್ಥಿತಿ ಎದುರಾಗಿದೆ. ಬಸ್‌ಗಳು ಇದ್ದರೂ ನಿಲುಗಡೆ ಮಾಡುವುದಿಲ್ಲ ಎಂದು ಆಗ್ರಹಿಸಿದರು.
ಸಮಯಕ್ಕೆ ಸರಿಯಾಗಿ ಬಸ್‌ಗಳು ನಿಲುಗಡೆಯಾಗುತ್ತಿಲ್ಲ. ವಯೋವೃದ್ಧರು, ಮಕ್ಕಳು ಬಿಸಿಲಿನಲ್ಲಿ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸಪೇಟೆ - ಸಂಡೂರು ಎಲ್ಲ ಬಸ್‌ಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net