ಗೋ ಹತ್ಯೆ ತಡೆದು ಕಾನೂನು ಸುವ್ಯವಸ್ಥೆ ಕಾಪಾಡಿ

ಬಕ್ರೀದ್ ಸಂದರ್ಭದಲ್ಲಿ ಗೋವುಗಳ ಅಕ್ರಮ ಸಾಗಣೆ ಹಾಗೂ ಗೋ ಹತ್ಯೆ ತಡೆಯುವಂತೆ ಒತ್ತಾಯಿಸಿ ಹರಪನಹಳ್ಳಿಯಲ್ಲಿ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಬಕ್ರೀದ್ ಸಂದರ್ಭದಲ್ಲಿ ಗೋವುಗಳ ಅಕ್ರಮ ಸಾಗಣೆ ಹಾಗೂ ಗೋ ಹತ್ಯೆ ತಡೆಯುವಂತೆ ಒತ್ತಾಯಿಸಿ ಹರಪನಹಳ್ಳಿಯಲ್ಲಿ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
Published on
ಹರಪನಹಳ್ಳಿ: ಬಕ್ರೀದ್ ವೇಳೆ ಗೋವುಗಳ ಅಕ್ರಮ ಸಾಗಣೆ ಹಾಗೂ ಗೋ ಹತ್ಯೆ ತಡೆದು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ಬಿ.ವಿ ಗಿರೀಶ್ ಬಾಬುಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಹಿಂದೂ ಜನಜಾಗೃತಿ ವೇದಿಕೆ ವಕ್ತಾರ ಕೆ.ಚಿದಾನಂದಪ್ಪ ಮಾತನಾಡಿ, ಮೇ 28 ರಂದು ಬಕ್ರೀದ್ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ರಾಜ್ಯದ ಅನೇಕ ಕಡೆ ಅಕ್ರಮವಾಗಿ ಗೋವು, ಎಮ್ಮೆ, ಕರುಗಳ ಸಾಗಾಣಿಕೆ ಹಾಗೂ ಗೋಹತ್ಯೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಗೋಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ ಕಾನೂನು ಉಲ್ಲಂಘಿಸಿ ರಸ್ತೆ ಬದಿ, ಜನವಸತಿ ಪ್ರದೇಶ ಹಾಗೂ ತಾತ್ಕಾಲಿಕ ಸ್ಥಳಗಳಲ್ಲಿ ಗೋಹತ್ಯೆ ನಡೆಯುತ್ತಿರುವ ಸಾಧ್ಯತೆಗಳಿವೆ. ಇಂತಹ ಕೃತ್ಯಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೂ ನೋವು ಉಂಟಾಗುವುದರಿಂದ ಗೋ ಹತ್ಯೆ ತಡೆಯಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ತಿಪ್ಪನಾಯಕನಹಳ್ಳಿ ಚಿದಾನಂದಪ್ಪ, ಶಿವಾನಂದ, ಪ್ರಶಾಂತ, ಬಸವರಾಜ ದಬಾಡಿ, ಅಶೋಕ ಶೃಂಗಾರತೋಟ, ಹೋಟೆಲ್ ಕೊಟ್ರೇಶ, ಕವಸರ ಬಸವರಾಜ, ಶ್ರೇಯಸ್ಸು, ವಿನಾಯಕ, ಅಶ್ವಿನಿ ಜೈನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net