ಸಿರಿಧಾನ್ಯ ಆಹಾರ ಬಳಸಿ ಆರೋಗ್ಯವಾಗಿರಿ

ಹೊಸಪೇಟೆ ಸಮಗ್ರ ಕೃಷಿ ಪದ್ದತಿಯ ಉತ್ಕೃಷ್ಟ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಹಿಳೆಯರಿಗೆ ವಿಚಾರಿಸಿದರು. ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ, ಉಪ ನಿರ್ದೇಶಕ ನಯೀಮ್ ಪಾಷಾ, ಎಇಇಯು ಸುನೀತಾ, ಎಡಿಎ ನಾಜ್‌ನೀನ್ ನದಾಫ್, ಎಡಿಎ ವಿದ್ಯಾವತಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮರೆತು ಹೋದ ಖಾದ್ಯಗಳ ಸ್ಪರ್ಧೆಗೆ ಚಾಲನೆ ನೀಡಿ ಜಿಲ್ಲಾಧಿಕಾರಿ ಸಲಹೆ
ಹೊಸಪೇಟೆ: ಸಾರ್ವಜನಿಕರು ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳನ್ನು ನಿತ್ಯದ ಆಹಾರದಲ್ಲಿ ಆಳವಡಿಸಿಕೊಳ್ಳಲು ಸ್ಪರ್ಧೆ ಸಹಕಾರಿ ಆಗಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ನಗರದ ಸಮಗ್ರ ಕೃಷಿ ಪದ್ದತಿಯ ಉತ್ಕೃಷ್ಟ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳನ್ನು ದಿನನಿತ್ಯದ ಆಹಾರ ಪದ್ದತಿಯಲ್ಲಿ ಹೆಚ್ಚಾಗಿ ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಇವುಗಳಲ್ಲಿ ಶಕ್ತಿಶಾಲಿ ಆಯಂಟಿ ಆಕ್ಸಿಡೆಂಟ್‌ಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ರೋಗಗಳನ್ನು ದೂರವಿಡಲು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯಕವಾಗುತ್ತವೆ. ಸಕ್ಕರೆ ಕಾಯಿಲೆ, ಬಿಪಿ ಮತ್ತು ವಿವಿಧ ಕಾಯಿಲೆಗಳ ತಡೆಗಟ್ಟಲು ಸಹಕಾರಿ ಆಗಲಿದೆ. ಸಿರಿಧಾನ್ಯ ಮತ್ತು ಖಾದ್ಯಗಳ ವಿಭಿನ್ನವಾದ ಆಹಾರಗಳನ್ನು ಶುಚಿ-ರುಚಿಯಾಗಿ ಪ್ರತಿಯೊಬ್ಬರು ತಯಾರಿಸಿದ್ದಾರೆ. ಪ್ರತಿ ಟೇಬಲ್‌ಗೆ ಹೋಗಿ ಪ್ರತಿಯೊಬ್ಬರ ರುಚಿಯನ್ನು ಅನುಭವಿಸಲು ನನಗೆ ಸಿಕ್ಕಿದ ಭಾಗ್ಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net