ಗಂಗಾ ಪೂಜಾಕಾರ್ಯಕ್ರಮಕ್ಕೆ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿದಂತೆಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಬಳ್ಳಾರಿ, ಚಿತ್ರದುರ್ಗಜಿಲ್ಲೆಯ ನಾನಾ ಕಡೆಯಿಂದ ಮ್ಯಾಸನಾಯಕ ಸಮುದಾಯದಜನ ಗುಂಪು ಗುಂಪಾಗಿ ಹಂಪಿಯಕಡೆ ಪ್ರಯಾಣ ಬೆಳೆಸಿದರು.ಕೆಲವರು ಶುಕ್ರವಾರರಾತ್ರಿ ಹಂಪಿಯಲ್ಲಿತAಗಿದ್ದರೆ, ಇನ್ನೂ ಕೆಲವರು ಶನಿವಾರ ಬೆಳಗ್ಗೆ ಬಂದುಧಾರ್ಮಿಕಕಾರ್ಯಕ್ರಮದಲ್ಲಿ ಭಾಗಿಯಾದರು.ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಹರಕೆ ತೀರಿಸಿದರು.