ಹಳೆ ವಿದ್ಯಾರ್ಥಿಗಳಿಂದ ಕ್ರೀಡಾ ಸಮವಸ್ತ್ರ

ಕಮಲಾಪುರದ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಪಟುಗಳಿಗೆ ಭಾನುವಾರ ಉಚಿತ ಕ್ರೀಡಾ ಸಮವಸ್ತ್ರ (ಜೆರ್ಸಿ) ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮೌಲಾ ಸಾಬ್ ವಿತರಿಸಿದರು. ಶಾಲೆಯ ಮುಖ್ಯಶಿಕ್ಷಕಿ ಸುರೇಖ, ಸಹಶಿಕ್ಷಕರಾದ ಶಾಮಿದ್ ಅಲಿ, ವಲಿಸಾಬ್ ಇತರರಿದ್ದರು.
ಕಮಲಾಪುರದ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಪಟುಗಳಿಗೆ ಭಾನುವಾರ ಉಚಿತ ಕ್ರೀಡಾ ಸಮವಸ್ತ್ರ (ಜೆರ್ಸಿ) ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮೌಲಾ ಸಾಬ್ ವಿತರಿಸಿದರು. ಶಾಲೆಯ ಮುಖ್ಯಶಿಕ್ಷಕಿ ಸುರೇಖ, ಸಹಶಿಕ್ಷಕರಾದ ಶಾಮಿದ್ ಅಲಿ, ವಲಿಸಾಬ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಲಯ ಮಟ್ಟದ ಕ್ರೀಡಾಕೂಟದ
  • ಕಮಲಾಪುರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿತರಣೆ

ಹೊಸಪೇಟೆ:

ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದ ನಿಮಿತ್ತ ಸಮೀಪದ ಕಮಲಾಪುರದ ಸರ್ಕಾರಿ ಪ್ರೌಢಶಾಲೆಯ 50 ಕ್ರೀಡಾಪಟುಗಳಿಗೆ 1999-2002ರ ಸಾಲಿನ ಹಳೆ ವಿದ್ಯಾರ್ಥಿಗಳ ಬಳಗದಿಂದ ಸ್ವಾತಂತ್ರö್ಯದಿನಾವರಣೆಯಲ್ಲಿ ಭಾನುವಾರ ಉಚಿತ ಕ್ರೀಡಾ ಸಮವಸ್ತ್ರ (ಜೆರ್ಸಿ) ವಿತರಿಸಲಾಯಿತು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮೌಲಾ ಸಾಬ್ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಬಾಳ್ವೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ನಮ್ಮ ಶಾಲೆಯ 1999-2002ರ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಹಾಗೂ ಕಿರಿಯ ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಗಾಧ ಕ್ರೀಡಾ ಪ್ರತಿಭೆಯಿದೆ. ಸರಿಯಾದ ಪ್ರೋತ್ಸಾಹ ಮತ್ತು ಸೌಲಭ್ಯಗಳು ಸಿಕ್ಕರೆ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಸಾಧ್ಯ. ಹಳೆ ವಿದ್ಯಾರ್ಥಿಗಳು ನೀಡಿರುವ ಈ ಪ್ರೋತ್ಸಾಹವನ್ನು ಸದುಪಯೋಗಪಡಿಸಿಕೊಂಡು, ಮುಂಬರುವ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಕೀರ್ತಿ ತರಬೇಕು ಎಂದರು.

ಶಾಲೆಯ ಮುಖ್ಯಶಿಕ್ಷಕಿ ಸುರೇಖ, ಸಹಶಿಕ್ಷಕರಾದ ಶಾಮಿದ್ ಅಲಿ, ವಲಿಸಾಬ್, ದೈಹಿಕ ಶಿಕ್ಷಕಿ ಉಮಾ, 1999-2002ರ ಸಾಲಿನ ಹಳೆ ವಿದ್ಯಾರ್ಥಿಗಳಾದ ಹನುಮಂತ, ಯಲ್ಲಪ್ಪ, ರವಿಕುಮಾರ್ ತಾಯಪ್ಪ. ಗುಂಡರಾಜ, ಜಬಿಬುಲ್ಲ, ಕೃಷ್ಣ, ವೆಂಕಟೇಶ್, ಪರಮೇಶಿ, ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net