ಕೂಡ್ಲಿಗಿ: ಶ್ರೀರಾಮ ನವಮಿ ಅಂಗವಾಗಿ ಶುಕ್ರವಾರ ಪಟ್ಟಣದ ಆರಾಧ್ಯ ದೈವ ಶ್ರೀ ಕೊತ್ತಲ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಬ್ರಹ್ಮ ರಥೋತ್ಸವ ಹಾಗೂ ಸಂಜೆ ಮಹಾ ರಥೋತ್ಸವ ಅತ್ಯಂತ ಶ್ರದ್ಧೆ-ಭಕ್ತಿಯಿಂದ ನೆರವೇರಿದವು.
ಬ್ರಹ್ಮ ರಥೋತ್ಸವ ಅಂಗವಾಗಿ ಸ್ವಾಮಿ ರಥವನ್ನು ಬೃಹತ್ ಹೂವಿನ ಹಾರ, ಬಾಳೆಕಂಬ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಅಪರಾಹ್ನ 12 ಗಂಟೆಗೆ ಜೋಯಿಸ್ ಹಯವಧನಚಾರ್ ಹಾಗೂ ಅರ್ಚಕ ಜಿ.ಪಿ.ರಂಗನಾಥ ನೇತೃತ್ವದಲ್ಲಿ ಬಲಿ ಹರಣ, ರಥಾಂಗಹೋಮ ನಂತರ ಮಡಿಯಲ್ಲಿದ್ದ ಋತ್ವಿಜರು ಹಾಗೂ ನೂರಾರು ಭಕ್ತರ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವ ಜರುಗಿತು. ಬೆಳಗ್ಗೆ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಕೋಸಂಬರಿ, ಪಾನಕ ಹಾಗೂ ಪುಳಿಯೋಗರೆ ಪ್ರಸಾದ ವಿತರಣೆ ಮಾಡಲಾಯಿತು.