ಅಕ್ಷಯ ತೃತೀಯಾ ಹಿಂದೂಗಳ ಪ್ರಕಾರ ಅತ್ಯಂತ ಮಂಗಳಕರವಾದ ದಿನವಾಗಿದೆ. ಅಕ್ಷಯ ಎಂದರೆ ಎಂದಿಗೂ ಕಡಿಮೆಯಾಗದ ಎಂದರ್ಥ. ಆದ್ದರಿಂದ ದೇಗುಲಗಳಲ್ಲಿ ಈ ಮಂಗಳಕರವಾದ ದಿನಕ್ಕೆ ಪ್ರತಿಯೊಬ್ಬರಿಗೂ ಶುಭವಾಗಲಿ ಎಂದು ವಿಶೇಷ ಪೂಜೆ ಮಾಡುವುದು ಪ್ರತಿತಿ. ಆದ್ದರಿಂದ ಸಾಂಪ್ರದಾಯದAತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲ ಸೇರಿಂತೆ ಜಿಲ್ಲೆಯಲ್ಲಿ ವಿವಿಧ ದೇಗುಲಗಳಲ್ಲಿ ರುದ್ರಾಭಿಶೇಕ, ಪಂಚಾಮೃತ ಅಭಿಷೇಕ ಸೇರಿಂತೆಇತರೆ ಅಭಿಷೇಕ ನಡೆದವು. ಭಕ್ತರು ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಬಂಗಾರ ಖರೀಧಿ ಮಾಡಿದರು. ನಗರದಲ್ಲಿ ಬಂಗಾರದ ಅಂಗಡಿಗಳು ಗ್ರಾಹಕರಿಂದ ತುಂಬಿತು.