ಹೊಸಪೇಟೆ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಅತ್ಯುತ್ತಮ ಜನಸ್ನೇಹಿ ಪೊಲೀಸ್ ಸೇವೆ ಸಲ್ಲಿಸಿರುವುದನ್ನು ಗುರುತಿಸಿ, ವಿಜಯನಗರ ಎಸ್ಪಿ ಎಸ್. ಜಾಹ್ನಾವಿ ಅವರಿಗೆ ಮಹಾನಿರ್ದೇಶಕರ ಕಮೆಂಡೇಷನ್ ಡಿಸ್ಕ್ ಪ್ರಶಸ್ತಿ ಲಭಿಸಿದೆ.
ಪೊಲೀಸ್ ಇಲಾಖೆಯಲ್ಲಿನ ಅವರ ಕರ್ತವ್ಯ ನಿಷ್ಠೆ, ಅಪರಾಧ ತಡೆಗಟ್ಟುವಿಕೆ ಮತ್ತು ಇಲಾಖೆಯ ದಕ್ಷ ಆಡಳಿತವನ್ನು ಶ್ಲಾಘಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಮ್ ಗೌರವವನ್ನು ಪ್ರಕಟಿಸಿದ್ದಾರೆ.