ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ರೈತ ಬಿತ್ತನೆಗೆ ಭೂಮಿ ಹದಗೊಳಿಸುತ್ತಿರುವುದು.
Published on:
Copied
Follow Us
ಹೂವಿನಹಡಗಲಿ: ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿರುವುದರಿಂದ ತಾಲೂಕಿನ ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಕೈಗೊಂಡಿದ್ದಾರೆ.
ತಾಲೂಕಿನಲ್ಲಿ ವಾಡಿಕೆಗಿಂತ ಶೇ.17 ಹೆಚ್ಚು ಮಳೆಯಾಗಿದೆ. ಮಳೆಯಾಶ್ರಿತ, ನೀರಾವರಿ ಸೇರಿ 63,955 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಹಿರೇಮಲ್ಲನಕೆರೆ, ಹೊಳಗುಂದಿ ಹಾಗೂ ಹೊಳಲು ಗ್ರಾಮದಲ್ಲಿ ಮಾರಾಟ ಕೇಂದ್ರ ಆರಂಭಿಸಲಾಗಿದೆ.
ರೈತಸಂಪರ್ಕ ಕೇಂದ್ರಗಳು ಹಾಗೂ ಹೆಚ್ಚುವರಿ ಕೇಂದ್ರಗಳಲ್ಲಿ ಮೇ 24ರವರೆಗೆ 282 ಕ್ವಿಂಟಾಲ್ ಮೆಕ್ಕೆಜೋಳ, 86.35 ಕ್ವಿಂಟಾಲ್ ತೊಗರಿ, 25.15 ಕ್ವಿಂಟಾಲ್ ಜೋಳ, 450 ಕ್ವಿಂಟಾಲ್ ಸೂರ್ಯಕಾಂತಿ ಸೇರಿದಂತೆ ಒಟ್ಟು 844.30 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ.
425 ಟನ್ ಡಿಎಪಿ, 254 ಟನ್ ಎಂಒಪಿ, 2680 ಟನ್ ಎನ್‌ಪಿಕೆ ರಸಗೊಬ್ಬರ ದಾಸ್ತಾನಿದ್ದು, ಮೇ 24 ರವರೆಗೆ 5400 ಟನ್ ಯೂರಿಯಾ, 3893 ಟನ್ ಡಿಎಪಿ, 702 ಟನ್ ಎಂಒಪಿ, 9766 ಟನ್ ಎನ್‌ಪಿಕೆ ರಸಗೊಬ್ಬರದ ಬೇಡಿಕೆ ಇದೆ.
ಕೃಷಿಯಲ್ಲಿ ಆಧುನಿಕಯಂತ್ರಗಳ ಬಳಕೆ ಹೆಚ್ಚಾಗಿರುವುದರಿಂದ ಸಣ್ಣ ಮತ್ತು ಅತಿಸಣ್ಣ ರೈತರು ಯಂತ್ರಗಳನ್ನು ಬಾಡಿಗೆ ಪಡೆಯಲು ಪರದಾಡುತ್ತಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕೂಡ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.