ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಿ

ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ರ‍್ನಾಟಕ ಪ್ರಾಂತ ರೈತ ಸಂಘದಿಂದ ಎಂಪಿ ಈ.ತುಕಾರಾಂ ಅವರ ಆಪ್ತ ಸಹಾಯಕ ಜಯಸಿಂಹ ಅವರಿಗೆ ಪ್ರತಿಭಟನೆ ನಡೆಯಿತು. ಪ್ರಮುಖರಾದ ಯು.ಬಸವರಾಜ, ಆರ್ ಭಾಸ್ಕರ್ ರೆಡ್ಡಿ, ಎನ್.ಯಲ್ಲಾಲಿಂಗ, ಆರ್.ಎಸ್.ಬಸವರಾಜ, ಬಿ.ಮಾಳಮ್ಮ, ಕೆ.ಎಂ.ಫ್ವಪ್ನ, ಎಂ.ಗೋಪಾಲ, ಎಂ.ಜಂಬಯ್ಯನಾಯಕ ಇತರರಿದ್ದರು.
ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ರ‍್ನಾಟಕ ಪ್ರಾಂತ ರೈತ ಸಂಘದಿಂದ ಎಂಪಿ ಈ.ತುಕಾರಾಂ ಅವರ ಆಪ್ತ ಸಹಾಯಕ ಜಯಸಿಂಹ ಅವರಿಗೆ ಪ್ರತಿಭಟನೆ ನಡೆಯಿತು. ಪ್ರಮುಖರಾದ ಯು.ಬಸವರಾಜ, ಆರ್ ಭಾಸ್ಕರ್ ರೆಡ್ಡಿ, ಎನ್.ಯಲ್ಲಾಲಿಂಗ, ಆರ್.ಎಸ್.ಬಸವರಾಜ, ಬಿ.ಮಾಳಮ್ಮ, ಕೆ.ಎಂ.ಫ್ವಪ್ನ, ಎಂ.ಗೋಪಾಲ, ಎಂ.ಜಂಬಯ್ಯನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಹೊಸಪೇಟೆ: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ರ‍್ನಾಟಕ ಪ್ರಾಂತ ರೈತ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ ಸೇರಿದಂತೆ ಇತರೆ ತಾಲೂಕುಗಳಲ್ಲಿ ಸಾವಿರಾರು ಕಬ್ಬು ಬೆಳೆಗಾರರಿದ್ದಾರೆ. ರೈತರು ನಷ್ಟದಲ್ಲಿ ಕಬ್ಬು ಬೆಳೆಗಳನ್ನು ಸಾಗಿಸುತ್ತಿದ್ದಾರೆ. ಜಿಲ್ಲೆಯ ಬಗರ್ ಹುಕುಂ ಮತ್ತಿತರೆ ರ‍್ಕಾರಿ, ಅರಣ್ಯ ಜಮೀನು ಸಾಗುವಳಿ ಮಾಡಿ ಹಕ್ಜುಪತ್ರಕ್ಕಾಗಿ ಫಾರಂ 50, 53 ಹಾಗೂ 57 ಸಲ್ಲಿಸಿದವರ ರ‍್ಜಿಗಳು ಭೂ ನ್ಯಾಯ ಮಂಡಳಿ ಮುಂದೆ ತಾರದೆ, ತಹಸೀಲ್ದಾರ್ ಕಾನೂನು ಬಾಹಿರವಾಗಿ ತಿರಸ್ಕರಿಸುತ್ತಿದ್ದಾರೆ. ಈ ಸಮಸ್ಯೆಯಲ್ಲಿ ಸಾವಿರಾರು ರ‍್ಜಿದಾರರು ಬಳಲುತ್ತಿದ್ದಾರೆ ಎಂದು ಆಗ್ರಹಿಸಿದರು.
ಜಿಲ್ಲಾ ಕೇಂದ್ರದಲ್ಲಿ ಸಕ್ಕರೆ ಮತ್ತು ಎಥನಾಲ್ ಕೈಗಾರಿಕೆಯನ್ನು ಸರ‍್ವಜನಿಕ ರಂಗದಲ್ಲಿ ಸ್ಥಾಪಿಸಬೇಕು. ಕಬ್ಬು ಬೆಳೆಯ ಶೇ.9.5 ಇಳುವರಿಯ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ಕನಿಷ್ಢ 5 ಸಾವಿರ ರೂ. ಕೊಡಬೇಕು. ಸರ‍್ವಜನಿಕ ತೂಕದ ಯಂತ್ರವನ್ನು ಸ್ಥಾಪಿಸಬೇಕು. ರ‍್ಕಾರಿ ಭೂಮಿ ಸಾಗುವಳಿದಾರರ ರ‍್ಜಿಗಳು ಭೂ ನ್ಯಾಯ ಮಂಡಳಿ ಮುಂದೆ ತಾರದೆ ವಿಲೇ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ತಕ್ಷಣವೇ ರ‍್ಜಿದಾರರ ವಾಸ್ತವಿಕ ರ‍್ವೇಗೆ ಕ್ರಮವಹಿಸಿ ಪಹಣಿಯ ಸಾಗುವಳಿ ಕಾಲಂ ನಲ್ಲಿ ರೈತರ ಹೆಸರುಗಳನ್ನು ಸೇರಿಸಬೇಕು. ಸಕ್ರಮಕ್ಕೆ ಭೂ ವಿತರಣೆ ನ್ಯಾಯ ಮಂಡಳಿಗಳನ್ನು ರಚಿಸಿ ಸಭೆಗಳನ್ನು ಸಂಘಟಿಸಬೇಕು. ಅರಣ್ಯ ಭೂಮಿಯ ಹಕ್ಕನ್ನು ಇತರೆ ಅರಣ್ಯವಾಸಿ ಬಡವರಿಗೆ ಖಾತರಿಪಡಿಸಲು ಮೂರು ತಲೆ ಮಾರುಗಳ ಸಾಕ್ಷಿ ಕೇಳುವುದನ್ನು ಕೈಬಿಟ್ಟು 2005 ರ ಪರ‍್ವ ಸಾಗುವಳಿಯಲ್ಲಿರುವ ರ‍್ಜಿದಾರರಿಗೆ ಹಕ್ಕುಪತ್ರ ನೀಡುವಂತೆ ಅಗತ್ಯ ಕ್ರಮ ವಹಿಸಬೇಕು. ಬಲವಂತದ ಭೂ ಸ್ವಾಧೀನವನ್ನು ಕೈಬಿಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net