ಕಂಪ್ಲಿ: ಪಟ್ಟಣದ ಹೊರವಲಯದಲ್ಲಿ ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ಕಾರ್ಯ ನಡೆದಿದೆ.
ತುಂಗಭದ್ರಾ ನದಿ ದಡದ ಸ್ಮಶಾನದ ಬಳಿ ಮಣ್ಣು ಪರೀಕ್ಷೆ ಭಾನುವಾರ ನಡೆಯಿತು. ಈ ಕುರಿತು ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಎಇಇ ಗಂಜಿ ಬಸವರೆಡ್ಡಿ, ನದಿ ದಂಡೆಯ ಎರಡೂ ಬದಿ ಮಣ್ಣು ಪರೀಕ್ಷೆ ಮಾಡಲಾಗುತ್ತಿದೆ.
ಸೇತುವೆ ನಿರ್ಮಾಣಕ್ಕೆ ಸೂಕ್ತ ಸ್ಥಳ, ಅನುಕೂಲತೆ ಗಮನಿಸಿ ವಿಸ್ತೃತ ಯೋಜನಾ ವರದಿ ನೀಡಲಾಗುವುದು. ವರದಿ ಅನುಸರಿಸಿ ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಗಲಿದೆ ಎಂದರು.