ಸ್ಲಂಜನರ ಸಂಘಟನೆ ಕರ್ನಾಟಕಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ ಎಚ್ಚರಿಕೆ
ಹೊಸಪೇಟೆ: ಸ್ಲಂ ಜನರಿಗೆ ಹಕ್ಕು ಪತ್ರ ವಿತರಿಸುವಲ್ಲಿ ಸರ್ಕಾರ ಹಾಗೂ ಸ್ಥಳೀಯ ಜಿಲ್ಲಾಡಳಿತ ವಿಫಲವಾಗಿದೆ ಎಂದು ಸ್ಲಂಜನರ ಸಂಘಟನೆ ಕರ್ನಾಟಕಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ ಎಂದು ಆರೋಪಿಸಿದರು.
ನಗರದ ಪತ್ರಿಕಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. 2022ರಲ್ಲಿ ಕಳೆದ ಸರ್ಕಾರ ಹಕ್ಕುಪತ್ರ ನೀಡಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಈ ವರೆಗೆ ಒಂದು ಹಕ್ಕು ಪತ್ರ ನೀಡದೇ ಸ್ಲಂ ನಿವಾಸಿಗಳನ್ನು ಕಡೆಗಣಿಸಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸ್ಲಂ ನಿವಾಸಿಗಳನ್ನು ನಿರ್ಲಕ್ಷಿಸಿರುವ ಸರ್ಕಾರಕ್ಕೆ ಒಂದು ವಾರದೊಳಗೆ ಹಕ್ಕು ಪತ್ರ ವಿತರಿಸಬೇಕು. ಇಲ್ಲವೆಂದರೆ ನಗರಸಭೆ ಆವರಣದಲ್ಲಿರುವ ಸ್ಲಂ ಬೋರ್ಡ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ನಂತರದ ದಿನಗಳಲ್ಲಿ ಶಾಸಕರು ಸಂಸದರು ಹಾಗೂ ಸಚಿವರಿಗೆ ಘೇರಾವ್ ಹಾಕುವ ಮೂಲಕ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಅಧ್ಯಕ್ಷ ಎಚ್.ಶೇಷು, ಪ್ರಮುಖರಾದ ತನ್ವೀರ್, ಗುತ್ತಿ ಕೈಲಾಸ್, ನೂರ್ ಜಹಾನ್, ರೂಪ ಲತಾ, ಜಾಫ್ರೀನ್, ರಾಮಚಂದ್ರ ಬಾಬು, ವಿಜಯ್ ಕುಮಾರ್, ಜಗನ್, ಶೇಕ್ ಮೆಹಬೂಬ್ ಬಾಷಾ, ಈರಣ್ಣ, ಹೊನ್ನಪ್ಪ ಹನುಮಂತ, ಮಾನಸಯ್ಯ, ಕರಿಯಪ್ಪ, ಕಾರ್ತಿಕ್, ಕಾಗಿ ಉಮೇಶ್ ಇತರರಿದ್ದರು.