ಶಿಬಿರದಿಂದ ಮಕ್ಕಳಲ್ಲಿ ಕೌಶಲ ಅಭಿವೃದ್ಧಿ

ಹರಪನಹಳ್ಳಿ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.
ಹರಪನಹಳ್ಳಿ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.
Published on
ಹರಪನಹಳ್ಳಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಸೃಜನಾತ್ಮಕ ಕೌಶಲಗಳನ್ನು ಅಭಿವೃದ್ಧಿ ಪಡಿಸುವುದು ಬೇಸಿಗೆ ಶಿಬಿರದ ಉದ್ದೇಶವಾಗದೆ ಎಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿಎಚ್‌ಎಂ ತಿಳಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಹಾಗೂ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಶಿಕ್ಷಣದ ಗುಣಮಟ್ಟದ ಸುಧಾರಣೆ, ಓದುವ ಹವ್ಯಾಸ ಹೆಚ್ಚಿಸುವುದು, ಮಾನಸಿಕ ಸ್ಥಿತಿ ಸಮಚಿತ್ತದಿಂದ ಇರುವಂತೆ ಮಾಡುವುದಕ್ಕೆ ನುರಿತ ಶಿಕ್ಷಕರಿಂದ ಮಕ್ಕಳಿಗೆ ಉಚಿತವಾಗಿ ಈ ಶಿಬಿರ ಆರಂಭಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿಣಿ ಸದಸ್ಯ ಮಂಜುನಾಥ ಪೂಜಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸೂರ್ಯನಾಯ್ಕ, ಶಿಕ್ಷಕರಾದ ಗಿರಿರಾಜ್, ಗುರುಮೂರ್ತಿ, ಕವಿತಾ ಐಜಿ, ಜಯಲಕ್ಷ್ಮೀ, ರೇಣುಕಾ, ಮಲ್ಲಮ್ಮ ವಡ್ಡರ್, ಸವಿತಾ, ಶೋಭಾ ಕುಮಾರಿ, ರೇಷ್ಮಾ, ಮಂಜುಳಾ, ಹುಸೇನ್ ಬಾಷಾ, ನಾಗರಾಜ, ಕೊಟ್ರಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net