ಎಸ್‌ಐಆರ್ ಪ್ರಕ್ರಿಯೆ ಸೆ.30ರ ವರೆಗೆ ವಿಸ್ತರಿಸಿ

ಜೆ.ಎಂ.ವೀರಸAಗಯ್ಯ
ಜೆ.ಎಂ.ವೀರಸAಗಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ನಾಗರಿಕ ಮತ ಕಾವಲು ಸಮಿತಿ ರಾಜ್ಯ ಸಂಚಾಲಕ ಜೆ.ಎಂ.ವೀರಸAಗಯ್ಯ ಆಗ್ರಹ
ಹೊಸಪೇಟೆ: ಚುನಾವಣಾ ಆಯೋಗವು ರಾಜ್ಯದಲ್ಲಿ ಕೈಗೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಅವೈಜ್ಞಾನಿಕವಾಗಿದ್ದು, ಈ ಪ್ರಕ್ರಿಯೆಯನ್ನು ಸೆ.30ರ ವರೆಗೆ ವಿಸ್ತರಿಸಬೇಕೆಂದು ನಾಗರಿಕ ಮತ ಕಾವಲು ಸಮಿತಿಯ ರಾಜ್ಯ ಸಂಚಾಲಕ ಜೆ.ಎಂ.ವೀರಸAಗಯ್ಯ ಒತ್ತಾಯಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ವಿಜಯನಗರ ಜಿಲ್ಲೆ ಸೇರಿದಂತೆ ಹಲವೆಡೆ ರೈತರು ಮತ್ತು ಕೂಲಿಕಾರ್ಮಿಕರು ವಲಸೆ ಹೋಗಿದ್ದಾರೆ. ಬಿಎಲ್‌ಒಗಳು ಭೇಟಿ ನೀಡಿದಾಗ ಮನೆಗಳು ಬೀಗ ಹಾಕಿರುತ್ತವೆ. ಇಂತಹ ಸಂದರ್ಭದಲ್ಲಿ ತರಾತುರಿಯಲ್ಲಿ ಪರಿಷ್ಕರಣೆ ನಡೆಸಿದರೆ ರಾಜ್ಯದ ಸುಮಾರು 1.90 ಕೋಟಿ ಜೀವಂತ ಮತದಾರರು ಹಕ್ಕಿನಿಂದ ವಂಚಿತರಾಗುವ ಆತಂಕವಿದೆ. ಆದ್ದರಿಂದ ಮತ ವಂಚಿತರ ಪಟ್ಟಿಯನ್ನು ಗ್ರಾಮಸಭೆಗಳಲ್ಲಿ ಡಂಗೂರ ಸಾರಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಈ ಪ್ರಕ್ರಿಯೆಯ ವಿರುದ್ಧ ಸ್ವಾತಂತ್ರ‍್ಯ ದಿನಾಚರಣೆಯಂದು ಕರಪತ್ರ ಹಂಚಿ ಜಾಗೃತಿ ಮೂಡಿಸುವುದರ ಜತೆಗೆ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಮುಖAಡರಾದ ರವಿಕುಮಾರ್ ತಂಬ್ರಳ್ಳಿ, ಸಣ್ಣ ಮಾರೆಪ್ಪ, ಮಹಮದ್ ನೂರ್, ಶಿವಕುಮಾರ್ ಜಾಫರ್, ಹನುಮೇಶ್ ರಾಮ್ ಹಾಗೂ ಎಚ್.ಎಂ. ಜಂಬುನಾಥ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net