ಕನ್ನಡ ವಿವಿಯಲ್ಲಿನ 48 ಜನ ಹೊರಗುತ್ತಿಗೆ ನೌಕರರಿಗೆ ಕಳೆದ 11 ತಿಂಗಳಿAದ ಸಂಬಳ ಪಾವತಿ ಮಾಡಬೇಕು ಎಂದು ಡಿಎಚ್ ಎಸ್ ಸಂಘಟನೆಯಿAದ ಕುಲಪತಿ ಡಾ.ಪರಮಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಮುಖರಾದ ಎಂ.ಜAಬಯ್ಯನಾಯಕ, ಬಿಸಾಟಿ ತಾಯಪ್ಪ, ದುರುಗಪ್ಪ ಇತರರಿದ್ದರು.
ಹೊಸಪೇಟೆ: ಭದ್ರತಾ ಹಾಗೂ ಸ್ವಚ್ಚತಾ ಸಿಬ್ಬಂದಿಯಾಗಿ ದುಡಿಯುತ್ತಿರುವ 48 ಜನ ಹೊರಗುತ್ತಿಗೆ ನೌಕರರಿಗೆ ಕಳೆದ 11 ತಿಂಗಳಿAದ ಸಂಬಳ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ಕನ್ನಡ ವಿವಿಯ ಕ್ರಿಯಾಶಕ್ತಿ ಮುಂದೆ ದಲಿತ ಹಕ್ಕುಗಳ ಸಮಿತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಕನ್ನಡ ವಿವಿ ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಆರ್ಥಿಕ ಮತ್ತು ಶೈಕ್ಷಣಿಕ ಸಂಪನ್ಮೂಲದ ಸರಿಯಾದ ಬಳಕೆ ಮತ್ತು ಕೊರತೆಗಳು, ವಿವಿ ಆಡಳಿತದ ಮೇಲೆ ಗಂಭೀರ ಪರಿಣಾಮ ಭೀರುತ್ತಿರುವುದು ಕಂಡುಬರುತ್ತಿದೆ. ಕನ್ನಡದ ಏಕೈಕ ವಿವಿ ಘನತೆ ಗೌರವಕ್ಕೆ ದಕ್ಕೆ ತರುತ್ತಿರುವುದು ಈ ರಾಜ್ಯದ ಕನ್ನಡದ ಮನಸ್ಸುಗಳಿಗೆ ನೋವು ತರುತ್ತಿದೆ. ವಿವಿ ಸ್ಥಾಪನೆಗಾಗಿ ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರು ಅತ್ಯಂತ ಕಡಿಮೆ ಬೆಲೆಗೆ ಮತ್ತು ಉಚಿತವಾಗಿ ತಮ್ಮ ಭೂಮಿಗಳನ್ನು ಬಿಟ್ಟುಕೊಟ್ಟರು. ಇಂತಹ ರೈತರ ಮಕ್ಕಳು ಮತ್ತು ಸಂಬAಧಿಕರು ಇಂದು ಕನ್ನಡ ವಿವಿಯಲ್ಲಿ ಕಡಿಮೆ ಕೂಲಿಗೆ ಹೊರಗುತ್ತಿಗೆ ನೌಕರರಾಗಿ ಕಳೆದ 15ರಿಂದ 20 ವರ್ಷಗಳಿಂದ ದುಡಿಯುತ್ತಿದ್ದಾರೆ. ಈಗ ಇವರಿಗೆ ಭೂಮಿ ಇಲ್ಲ, ಖಾಯಂ ಉದ್ಯೋಗವಿಲ್ಲ. 11 ತಿಂಗಳ ವೇತನ ಕೂಡ ಪಾವತಿಯಾಗಿಲ್ಲ.
ಕಳೆದ ವರ್ಷ ಇಲ್ಲಿನ ಹೊರಗುತ್ತಿಗೆ ನೌಕರನಾಗಿ ದುಡಿಯುತ್ತಿದ್ದ ನಾಯಕರ ನಂದೀಶ್‌ನ ಹೃದಯಘಾತದ ಮೃತಪಟ್ಟರು. ಇದಕ್ಕೆ ಮುಖ್ಯಕಾರಣ ವಿವಿ ಸಂಬಳ ನೀಡದಿರುವುದು, ಸಂಬಳ ಇಲ್ಲದೆ ಹಬ್ಬ ಮಾಡದಂತಹ ಹೀನಪರಿಸ್ಥಿತಿಗೆ ಒಳಗಾಗಿ ಸಾವನ್ನಪಿದ್ದಾರೆ. ಇನ್ನು ಪಿಎಫ್ ಇಲ್ಲದೇ ವೇತನ ಪಾವತಿ ಮಾಡಿದ್ದರಿಂದ ನಂದೀಶ್ ಅವರ ಮರಣದ ನಂತರ ದುಡಿದ ಹಣ ಬರಲಿಲ್ಲ. ಇದು ವಿವಿ ಹಾಗೂ ಏಜೆನ್ಸಿಗಳ ಅಕ್ರಮ ವ್ಯವಹಾರದಿಂದ ಸಮಸ್ಯೆ ಎದುರಾಗಿದೆ. ಇಂತಹ ಬಡವರ ಸಾವುಗಳು ಕನ್ನಡ ವಿವಿ ಮತ್ತೆ ಕಾರಣವಾಗಬಾರದು. 48 ಜನ ಹೊರಗುತ್ತಿಗೆ ನೌಕರರ 11 ತಿಂಗಳ ಸಂಬಳವನ್ನು ತಕ್ಷಣ ಪಾವತಿ ಮಾಡಬೇಕು. ಸರ್ಕಾರ ಕೂಡ ವಿವಿಗೆ ಅನುದಾನ ನೀಡಿ ಆರ್ಥಿಕ ಹೊರೆಯಿಂದ ತಪ್ಪಿಸಬೇಕು ಒತ್ತಾಯಿಸಿದರು.