ಸಿಎಂ ಕುರ್ಚಿಯ ಹೇಡಿ ಸಿದ್ದರಾಮಯ್ಯ

ಶಾಸಕ ಜನಾರ್ದನ ರೆಡ್ಡಿ
ಶಾಸಕ ಜನಾರ್ದನ ರೆಡ್ಡಿ
Published on

ಪ್ರಮುಖ ಮುಖ್ಯಾಂಶಗಳು

  • ಹೊಸಪೇಟೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಲೇವಡಿ
ಹೊಸಪೇಟೆ: ಹೈಕಮಾಂಡ್ ಹೆಸರು ಹೇಳುತ್ತಲೇ ಕುರ್ಚಿ ಬಿಡಲು ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದನದಿಂದ ಪ್ರದಾನಿ ಹೇಡಿತನದಿಂದ ಪಲಾಯನ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅಕ್ಷಮ್ಯ ಹೇಳಿಕೆ ಟ್ವೀಟ್ ಮಾಡಿದ್ದಾರೆ. ಆದರೆ, ಮಾತೆತ್ತಿದ್ದರೆ ಹೈಕಮಾಂಡ್ ಎಂದು ಹೇಳುತ್ತ ಕುರ್ಚಿಗೆ ಅಂಟಿಕೊAಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಡಿಯಾಗಿದ್ದಾರೆ ಹೊರತು ಪ್ರಧಾನಿ ಮೋದಿಯಲ್ಲ ಎಂದು ಲೇವಡಿ ಮಾಡಿದರು.
ಸಿಎಂ ಸಿದ್ದರಾಮಯ್ಯ ಅವರಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ. ಅವರು ಇನ್ನು ಮುಂದೆಯೂ ಸಿಎಂ ಸ್ಥಾನ ಬಿಟ್ಟುಕೊಡುವ ಲಕ್ಷಣ ಇಲ್ಲ. ರಾಜ್ಯದ ಅಭಿವೃದ್ಧಿ ಕೂಡ ಅಸಾಧ್ಯ. ಇದೆಲ್ಲದರ ಪರಿಣಾಮವಾಗಿ 2028ರಲ್ಲಿ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಬಳ್ಳಾರಿಯಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬAಧಿಸಿದAತೆ ಸಿಐಡಿ ತನಿಖೆಯ ಬಗ್ಗೆ ನನಗೆ ನಂಬಿಕೆಯೇ ಇಲ್ಲ. ದಾಖಲೆಗಳನ್ನು ಸಂಗ್ರಹಿಸಿದ್ದು, ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಎರಡು ದಿನದಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದೇನೆ. ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಗಂಗಾವತಿ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಅಧಿಕಾರ ಬರುವಾಗ ಗಂಗಾವತಿ, ಹೊಸಪೇಟೆ, ಹಂಪಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಿನಿಂದಲೇ ಯೋಜನೆ ಹಾಕಿಕೊಂಡಿದ್ದೇನೆ. ಈ ಹಿಂದೆ ಹಾಕಿದ್ದ ಯೋಜನೆಗಳು ಕಾರ್ಯಗತಗೊಳ್ಳಲಿಲ್ಲ. ಮುಂದೆ ಆ ಯೋಜನೆಗಳೆಲ್ಲ ಕಾರ್ಯಗತಗೊಳ್ಳಲಿವೆ ಎಂದರು.
ಜಿ ರಾಮ್ ಜಿ ಹೆಸರಿನ ವಿರುದ್ದ ನಕಲಿ ಗಾಂಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ನರೇಗ ಯೋಜನೆಯ ಎರಡು ಬಾರಿ ಬದಲಿಸಿದೆ. ಜಿ ರಾಮ್ ಜಿ ಹೆಸರು ಹೇಳಿದರೆ, ಪುಣ್ಯನಾದರೂ ಸಿಗಲಿದೆ. ಯೋಜನೆ ಬಗ್ಗೆ ಹೇಳುವ ಬದಲು ಗ್ರಾಮೀಣ ಭಾಗದ ಜನರಿಗೆ 25 ದಿನ ಹೆಚ್ಚಾಗಿದೆ ಅದನ್ನು ಹೇಳುವ ಬದಲು ಗಾಂಧಿ ಹೆಸರು ಬದಲಾವಣೆ ಮಾಡಿದ್ದಾರೆ ಎಂದು ಕೆಟ್ಟ ಆರೋಪ ಮಾಡಿದ್ದಾರೆ. ಪ್ರಧಾನಿ ನರೆಂದ್ರ ಮೋದಿ ಅವರು ಅಧಿಕಾರ ಬಂದಾಗ ಸ್ವಚ್ಛ ಭಾರತ್ ಹೆಸರಿನಲ್ಲಿ ಗಾಂಧಿ ಜಿ ಪೋಟೋ ಸಹಿತ ಬಂದಿದ್ದಾರೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net