ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಶಿವನಾರದಮುನಿ ರಥೋತ್ಸವ ಜರುಗಿತು.
Published on:
Copied
Follow Us
ಹರಪನಹಳ್ಳಿ: ಚಿಗಟೇರಿ ಗ್ರಾಮದಲ್ಲಿ ಶಿವನಾರದಮುನಿ ಬ್ರಹ್ಮ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.
ಮಣ್ಣಿನ ಮಡಕೆಯಲ್ಲಿ ಅನ್ನ, ಬಾಳೆಹಣ್ಣು, ಸಕ್ಕರೆಯಿಂದ ತಯಾರಿಸಿದ ಎಡೆಯನ್ನು ಭಕ್ತರು ಹೆಗಲ ಮೇಲೆ ಹೊತ್ತು ತಂದು ನಾರದಮುನಿಗೆ ಸಮರ್ಪಿಸಿದರು. ಭಕ್ತರು ನಾರು ಎಸೆದು ಭಕ್ತಿ ಸಮರ್ಪಿಸಿದರು. ನಿಷೇಧದ ನಡುವೆ ಭಕ್ತರು ಬಾಳೆಹಣ್ಣು ಎಸೆದರು.
ರಥೋತ್ಸವಕ್ಕೂ ಮುನ್ನ ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬೆಡಗಿನ ಮನೆ ಕಟ್ಟಡ ಉದ್ಘಾಟಿಸಿದರು. ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಆವರಣದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಭಕ್ತರಿಗೆ ಯಾತ್ರಿ ನಿವಾಸ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.