ಕರಡಿ ದಾಳಿಗೆ ಕುರಿಗಾಯಿ ಸಾವು

ಜಿ.ಓಬಯ್ಯ
ಜಿ.ಓಬಯ್ಯ
Published on
ಕೂಡ್ಲಿಗಿ (ವಿಜಯನಗರ): ತಾಲೂಕಿನ ಹಾಲಸಾಗರ ಬಳಿ ಸೋಮವಾರ ಕುರಿ ಕಾಯುತ್ತಿದ್ದ ಜಿ. ಓಬಯ್ಯ(45) ಎಂಬುವರ ಮೇಲೆ ಕರಡಿ ದಾಳಿ ಮಾಡಿದ್ದು, ಸ್ಥಳದಲ್ಲೇ ಮೃತರಾಗಿದ್ದಾರೆ. ನಂತರ ದಾಳಿ ಮಾಡಿದ ಕರಡಿಗೆ ಜನರು ಹುಡುಕಾಡಿ ಸಾಯಿಸಿದ್ದಾರೆ.
ಜಿ. ಓಬಯ್ಯ ಕುರಿ ಮೇಯಿಸಲು ಗ್ರಾಮದ ಹೊರ ವಲಯದಲ್ಲಿ ಹೋಗಿದ್ದಾಗ ಕರಡಿ ದಾಳಿ ಮಾಡಿ ತಲೆ, ಕಾಲು, ಕೈ ಸೇರಿದಂತೆ ದೇಹದ ತುಂಬಾ ಪರಚಿ ಗಂಭೀರ ಗಾಯಗೊಳಿಸಿದೆ. ಇದರಿಂದ ಓಬಯ್ಯ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಮಧ್ಯಾಹ್ನ ದಾಳಿ ಮಾಡಿದ್ದು, ಸಂಜೆ ಸ್ಥಳೀಯರು ಇದನ್ನು ಗಮನಿಸಿದ್ದಾರೆ. ನಂತರ ಗುಡೇಕೋಟೆ ವಲಯ ಅರಣ್ಯ ಅಧಿಕಾರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಕರಡಿಯ ಹತ್ಯೆ

ಕರಡಿ ದಾಳಿ ವಿಷಯ ತಿಳಿದ ಜನರು ಅರಣ್ಯದಲ್ಲಿ ಹೋಗಿ ಅಲ್ಲಿಯೇ ಇದ್ದ ಕರಡಿ ಮೇಲೆ ದೊಣ್ಣೆ, ಬಡಿಗೆಗಳಿಂದ ಹೊಡೆದು ಸಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net