ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ನೀರು

ಕೊಟ್ಟೂರಿನ ಎಪಿಎಂಸಿ ಎದುರು ಇರುವ ವೇ ಬಿಡ್ಜ್ ಬಳಿ ಚರಂಡಿ ನೀರು ರಸ್ತೆ ಮೇಲೆ ಹರಿದಿರುವುದು.
ಕೊಟ್ಟೂರಿನ ಎಪಿಎಂಸಿ ಎದುರು ಇರುವ ವೇ ಬಿಡ್ಜ್ ಬಳಿ ಚರಂಡಿ ನೀರು ರಸ್ತೆ ಮೇಲೆ ಹರಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಜನಸ್ಪಂದನೆಗೆ ದೂರು ಸಲ್ಲಿಸಿದರೂ ಸ್ಪಂದನೆಯಿಲ್ಲ
ಕೊಟ್ಟೂರು: ಪಟ್ಟಣದಲ್ಲಿ ಎಪಿಎಂಸಿ ಎದುರಿನ ವೇ ಬಿಡ್ಜ್ ಹತ್ತಿರ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಕುರಿತು ಸ್ಥಳೀಯ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಿದರೂ ಸ್ಪಂದಿಸಿಲ್ಲ.
ಚರಂಡಿ ತುಂಬಿರುವ ಕಾರಣ ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತಿದೆ ಎಂದು ನಿವಾಸಿಗಳು ಸಿಎಂ ಸಿದ್ದರಾಮಯ್ಯ ಅವರ ಜನಸ್ಪಂದನೆ 1902ಗೆ ದೂರು ಸಲ್ಲಿಸಿದ್ದಾರೆ.
ಅಧಿಕಾರಿಗಳು ಬಂದು ಪೋಟೋ ತೆಗೆದುಕೊಂಡು ಹೊಗಿದ್ದಾರೆ. ಆದರೆ, ಸಮಸ್ಯೆ ಪರಿಹರಿಸಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಚರಂಡಿ ದುರಸ್ತಿ ಮಾಡಿ ನೀರು ರಸ್ತೆಗೆ ಹೋಗುವುದನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net