ಪ್ರತ್ಯೇಕ ಕಳ್ಳತನ ಏಳು ಆರೋಪಿಗಳ ಬಂಧನ

ಹೊಸಪೇಟೆ ಎಸ್ಪಿ ಕಚೇರಿಯಲ್ಲಿ ಕಳ್ಳುವು ಆಗಿದ್ದ ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು.
ಹೊಸಪೇಟೆ ಎಸ್ಪಿ ಕಚೇರಿಯಲ್ಲಿ ಕಳ್ಳುವು ಆಗಿದ್ದ ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು.
Published on
ಹೊಸಪೇಟೆ: ಹರಪನಹಳ್ಳಿ ಉಪ ವಿಭಾಗದ ಪೊಲೀಸರು ಮನೆ ಹಾಗೂ ವಿದ್ಯುತ್ ತಂತಿಯ ಐದು ಪ್ರತ್ಯೇಕ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 9.75 ಲಕ್ಷ ರೂ ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು, ನಗದು, ಕಳ್ಳತನಕ್ಕೆ ಬಳಸಲಾದ ಬೈಕ್, ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹರಪನಹಳ್ಳಿ ಠಾಣೆ ವ್ಯಾಪ್ತಿಯ ನೀಲಗುಂದದಲ್ಲಿ, ಮೂರು ಕಳ್ಳತನ ಪ್ರಕರಣಗಳು ಹಾಗೂ ಚಿಗಟೇರಿ ಠಾಣೆ ವ್ಯಾಪ್ತಿಯಲ್ಲಿ ಒಂದು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾದ ಹರಪನಹಳ್ಳಿ ತಾಲೂಕಿನ ಅರಸೀಕರೆ ಎಸ್ಪಿ ಎಸ್.ಜಾಹ್ನವಿ ನಿವಾಸಿ ಇಲಿಯಾಜ್‌ನನ್ನು ಬಂಧಿಸಲಾಗಿದೆ. ಈತನಿಂದ 3,14,900 ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳು, 1.10 ಲಕ್ಷ ರೂ., ಕಳ್ಳತನಕ್ಕೆ ಬಳಸಲಾದ ಬೈಕ್ ಹಾಗೂ ಗೂಡ್ಸ್‌ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಹೂವಿನಹಡಗಲಿ ಠಾಣೆ ವ್ಯಾಪ್ತಿಯ ಹೊಳಗುಂದಿ-ಮೋರಿಗೇರಿ ರಸ್ತೆ, ಹಂಪಸಾಗರ ರಸ್ತೆ, ಕೊಯಿಲಾರಗಟ್ಟಿ-ಮೋವೇನಹಳ್ಳಿ ರಸ್ತೆ, ಕಾಗನೂರು ಗ್ರಾಮದಿಂದ ಹೊನ್ನನಾಯ್ಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ವಿದ್ಯುತ್‌ ಕಂಬಗಳಿಗೆ ಅಳವಡಿಸಲಾಗಿದ್ದ ಅಲ್ಯೂಮಿನಿಯಂ ವೈರನ್ನು ಕಳ್ಳತನ ಮಾಡಲಾಗಿತ್ತು. ವಿದ್ಯುತ್ ತಂತಿ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿ, 4.50 ಲಕ್ಷ ರೂ., 25 ಕೆಜಿ ವಿದ್ಯುತ್ ತಂತಿ ಹಾಗೂ ಕಳ್ಳತನಕ್ಕೆ ಬಳಸಲಾದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹರಪನಹಳ್ಳಿ ಡಿವೈಎಸ್ಪಿ ಡಾ.ಸಂತೋಷ್ ಚವ್ಹಾಣ್‌, ಸಿಪಿಐ ಮಹಾಂತೇಶ್ ಸಜ್ಜನ್ ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net