ಇ-ಖಾತೆಗೆ ಸರ್ವರ್ ಸಮಸ್ಯೆ ಕಾಟ

ಹೊಸಪೇಟೆ ನಗರಸಭೆ
ಹೊಸಪೇಟೆ ನಗರಸಭೆ
Published on

ಪ್ರಮುಖ ಮುಖ್ಯಾಂಶಗಳು

  • ದಾಖಲೆ ವಿತರಣೆಗೆ ಅನ್‌ಲೈನ್ ಅರ್ಜಿ ಸಲ್ಲಿಕೆ ಕಡ್ಡಾಯ
  • ಕಳೆದ 3 ತಿಂಗಳಿAದ ದೊರೆಯದ ಸೇವೆ
ಹೊಸಪೇಟೆ: ಆಡಳಿತ ಸುಧಾರಣೆಗಾಗಿ ಸರ್ಕಾರ ಜಾರಿ ಗೊಳಿಸಿರುವ ನೂತನ ಇ-ಸ್ವತ್ತು 2.0 ತಂತ್ರಾAಶ ದಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಇ-ಸ್ವತ್ತು ಖಾತೆ ದೊರೆಯ ದಂತಾಗಿದ್ದು, ಜನರು ತೊಂದರೆ ಅನುಭವಿಸು ವಂತಾಗಿದೆ.
ಇ-ಸ್ವತ್ತು ದಾಖಲೆ ವಿತರಣೆಗೆ ಸರ್ಕಾರ ಅನ್ ಲೈನ್ ಅರ್ಜಿ ಸಲ್ಲಿಕೆ ಕಡ್ಡಾಯಗೊಳಿಸಿದ್ದು, ಸರ್ವರ್ ಸಮಸ್ಯೆಯಿಂದಾಗಿ ಕಳೆದ ಮೂರು ತಿಂಗಳಿAದ ಜನರಿಗೆ ಸೇವೆ ದೊರೆಯದಂತಾಗಿದೆ. ಪಂಚಾಯಿತಿಗೆ ಭೌತಿಕವಾಗಿ ಅರ್ಜಿಯೂ ಸಲ್ಲಿಸಲು ಸಾಧ್ಯವಿಲ್ಲದ ಕಾರಣದಿಂದಾಗಿ ಜನರು ಕಚೇರಿಗೆ ಅಲೆಯುವಂತಾಗಿದೆ. ಆಡಳಿತ ಸುಧಾರಣೆಗಾಗಿ ಇ-ಸ್ವತ್ತು 1.0 ತಂತ್ರಾAಶವನ್ನು ಉನ್ನತೀಕರಿಸಿದ್ದು, ಇ-ಸ್ವತ್ತು 2.0 ತಂತ್ರಾAಶವನ್ನು ಜಾರಿಗೊಳಿಸಲಾಗಿದೆ. ಅದರಂತೆ ಪ್ರತಿಯೊಬ್ಬರೂ ಇ-ಸ್ವತ್ತಿಗಾಗಿ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ.
ತಾಂತ್ರಕ ಸಮಸ್ಯೆಯಿಂದಾಗಿ ಜನರಿಗೆ ಇ-ಸ್ವತ್ತು ದೊರೆಯದಂತೆ ಗ್ರಾಪಂ ವ್ಯಾಪ್ತಿಯಲ್ಲಿನ ಅಸ್ತಿ ದಾಖಲೆಗಳ ಕುರಿತು ಪಾರದರ್ಶಕ ಕ್ರಮಕ್ಕಾಗಿ ಸರ್ಕಾರ ತಂತ್ರಾAಶ ಅಭಿವೃದ್ಧಿಪಡಿಸಿದ್ದು, ಆನ್‌ಲೈನ್ ಮೂಲಕ ಇ-ಸ್ವತು ದಾಖಲೆ ವಿತರಣೆಗೆ ಆದ್ಯತೆ ನೀಡಿದೆ. ಅದರಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಆಸ್ತಿಗೆ ಇ-ಸ್ವತ್ತು ಕಡ್ಡಾಯವಾಗಿದೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಭೌತಿಕವಾಗಿ ಅರ್ಜಿ ಗಳನ್ನು ಸ್ವೀಕರಿಸುವುದಿಲ್ಲ. ಬದಲಿಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

ತಪ್ಪಿಲ್ಲ ಅಲೆದಾಟ

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ನಿವೇಶನಗಳಿಗೆ ಇ-ಸ್ವತ್ತು ಖಾತೆ ಹೊಂದುವುದು ಕಡ್ಡಾಯವಾಗಿದೆ. ಮುಂದುವರಿದು ಮನೆ ನಿರ್ಮಾಣಕ್ಕಾಗಿ ಬ್ಯಾಂಕ್‌ಗಳಿAದ ಸಾಲ ಸೌಲಭ್ಯ ಪಡೆಯ ಬೇಕಿದ್ದರೂ ಇ-ಸ್ವತ್ತು ಖಾತೆ ಕಡ್ಡಾಯವಾಗಿದೆ. ಆದರೆ, ಕಳೆದ ಮೂರು ತಿಂಗಳಿAದ ಇ-ಸ್ವತ್ತು ಖಾತೆ ದೊರೆಯದ ಪರಿಣಾಮ ಸಾರ್ವಜನಿಕರು ನಿತ್ಯ ಕಚೇರಿಗಳಿಗೆ ಅಲೆಯುವಂತಾಗಿದೆ.

ಭ್ರಷ್ಟಾಚಾರಕ್ಕೆ ಕಡಿವಾಣ

ಸಾರ್ವಜನಿಕರು ಇ-ಸ್ವತ್ತು ಖಾತೆಗೆ ದಾಖಲೆಗಳು ಸಲ್ಲಿಸಿ ವರ್ಷ ಕಳೆದರೂ ರಾಜಕೀಯ ಒತ್ತಡ, ಭ್ರಷ್ಟಾಚಾರ ಇತರೆ ಕಾರಣಗಳಿಂದ ಖಾತೆ ಮಾಡಿ ಕೊಡದಿರುವುದು, ಸಾರ್ವಜನಿಕರು ನೀಡಿದ ದಾಖಲೆಗಳನ್ನು ಕಳೆದು ಹಾಕುವುದು ನಡೆಯುತ್ತಿತ್ತು. ಆದರೆ, ಇನ್ನು ಮುಂದೆ ಸಾರ್ವಜನಿಕರು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದ್ದು, 15 ದಿನಗಳಲ್ಲಿ ಖಾತೆ ಕೊಡಬೇಕು ಇಲ್ಲವೇ, ಸೂಕ್ತ ಕಾರಣಗಳನ್ನು ಕೊಟ್ಟು ತಿರಸ್ಕಾರ ಮಾಡಬೇಕಿರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ.

ಮಂಡಳಿ ನಿರ್ಣಯಕ್ಕಿಲ್ಲ ಬೆಲೆ

ಹೊಸ ಇ-ಸ್ವತ್ತು 2.0 ತಂತ್ರಾAಶದಿAದಾಗಿ ಇನ್ನು ಮುಂದಿನ ದಿನಗಳಲ್ಲಿ ಇ-ಸ್ವತ್ತು ಖಾತೆಗೆ ಸ್ಥಳೀಯ ಸಂಸ್ಥೆಗಳ ಅನುಮೋದನೆಯ ಅಗತ್ಯವಿರುವುದಿಲ್ಲ. ಕಚೇರಿಗೆ ದಾಖಲೆಗಳನ್ನು ಸಲ್ಲಿಸಿದ ಬಳಿಕ ಸಿಬ್ಬಂದಿ ತಂತ್ರಾAಶಕ್ಕೆ ಅಪ್ ಲೋಡ್ ಮಾಡಿದ ದಿನದಿಂದ 45 ದಿನಗಳಲ್ಲಿ ಖಾತೆ ಮಾಡಿಕೊಡಬೇಕಿತ್ತು. ಆದರೆ, ಹೊಸ ತಂತ್ರಾAಶದಲ್ಲಿ 15 ದಿನಗಳ ಕಾಲಾವಕಾಶವನ್ನು ನೀಡಲಾಗಿದ್ದು, ಅಧ್ಯಕ್ಷರಿಗೆ ಬಯೋಮೆಟ್ರಿಕ್ ನೀಡಲಾಗಿದೆ. ಇದರಿಂದಾಗಿ ಸಾಮಾನ್ಯ ಸಭೆಯಲ್ಲಿಡಬೇಕೆಂಬ ನಿಯಮಕ್ಕೆ ಬೆಲೆಯಿಲ್ಲದಂತಾಗಿದೆ.
"

ಖಾತೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಇ-ಸ್ವತ್ತು 2.0 ತಂತ್ರಾAಶವನ್ನು ಸರ್ಕಾರ ಅಭಿವೃದ್ಧಿಪಡಿಸಿದೆ. ಹೊಸ ತಂತ್ರಾAಶ ಇರುವುದರಿಂದ ಕೆಲ ಸಮಸ್ಯೆಗಳು ಬರುತ್ತವೆ. ಕೆಲವೇ ದಿನಗಳಲ್ಲಿ ತಾಂತ್ರಿಕ ಸಮಸ್ಯೆಗಳು ಬಗೆಹರಿಯಲಿದ್ದು, ಸಾರ್ವಜನಿಕರಿಗೆ ಇ-ಖಾತೆ ಸುಲಭವಾಗಿ ಸಿಗಲಿದೆ.

"

ಇ-ಸ್ವತ್ತು ದಾಖಲೆ ನೋಂದಣಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಕಡ್ಡಾಯ ಆಗಿರುವುದು ಒಳ್ಳೆಯ ವಿಚಾರ. ಆದರೆ, ತಂತ್ರಾAಶದ ಉನ್ನತೀಕರಣದ ನೆಪದಲ್ಲಿ 2 ತಿಂಗಳಿAದ ಸಾರ್ವಜನಿಕರಿಗೆ ಖಾತೆಗಳನ್ನು ಕೊಡುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಖಾತೆ ವಿತರಿಸಬೇಕು.

04 ಮಂಜು 01
ಹೊಸಪೇಟೆ ನಗರಸಭೆ
04 ಮಂಜು 02
ಕವಿತಾ ಎಸ್.ಮನ್ನಿಕೇರಿ
04 ಮಂಜು 03
ಯಲ್ಲಲಿಂಗ
==========
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net