ಮೌಲಾನಾ ಅನ್ವರ್ ಬಾಷಾರಿಂದ ಪ್ರವಚನ

ಕೂಡ್ಲಿಗಿ ಕೊಟ್ಟೂರು ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಸುನ್ನಿ ಜಮಾತ್‌ನಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಕೂಡ್ಲಿಗಿ ಕೊಟ್ಟೂರು ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಸುನ್ನಿ ಜಮಾತ್‌ನಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು.
Published on
ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮುಸ್ಲಿಮರು ಗುರುವಾರ ಶ್ರದ್ಧೆ, ಭಕ್ತಿಯಿಂದ ಬಕ್ರೀದ್ ಆಚರಿಸಿದರು. ಕೊಟ್ಟೂರು ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.
ಅಹಲೇ ಹದೀಸ್ ಜಮಾತ್ ವತಿಯಿಂದ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸುನ್ನಿ ಜಮಾತ್‌ನಿಂದ ಬೆಳಗ್ಗೆ 8.30ಕ್ಕೆ ಜಾಮೀಯಾ ಮಸೀದಿಯಿಂದ ಮೆರವಣಿಗೆ ಮೂಲಕ ಬಂದು ಈದ್ಗಾ ಮೈದಾನದಲ್ಲಿ 9 ಗಂಟೆಗೆ ಮೌಲಾನಾ ಅನ್ವರ್ ಬಾಷಾ ಮಾರ್ಗದರ್ಶನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಮಾಜಿ ಸಚಿವ ಎನ್.ಎಂ.ನಬಿ, ಶಬೀರುಲ್ಲ, ಇಸ್ಮಾಯಿಲ್ ಸಾಬ್, ನಜೀರ್, ಉಸ್ಮಾನ್ ಸಾಬ್, ಇರ್ಷಾದ್, ಬಳೆಗಾರ್ ಶರೀಫ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net