ಚೀಟಿಗಳಿಲ್ಲದೇ ಔಷಧಿ ಮಾರಾಟ ಶಿಕ್ಷಾರ್ಹ ಅಪರಾಧ

ಹೊಸಪೇಟೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ ಮೆಡಿಕಲ್ ಶಾಪ್‍ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಎಸ್ಪಿ ಮಂಜುನಾಥ ಇತರರಿದ್ದರು.
ಹೊಸಪೇಟೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ ಮೆಡಿಕಲ್ ಶಾಪ್‍ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಎಸ್ಪಿ ಮಂಜುನಾಥ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯನಗರ ಡಿಸಿ, ಎಸ್ಪಿ ಅವರಿಂದ ಮೆಡಿಕಲ್ ಶಾಪ್‍ಗಳಿಗೆ ಭೇಟಿ ನೀಡಿ ಎಚ್ಚರಿಕೆ
ಹೊಸಪೇಟೆ: ಮಾದಕ ವಸ್ತುಗಳ ನಿರ್ಮೂಲನಾ ಅಭಿಯಾನ ನಿಮಿತ್ತ ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಎಸ್ಪಿ ಎಸ್.ಜಾಹ್ನವಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮೆಡಿಕಲ್ ಶಾಪ್‍ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಿಯಮಿತವಾಗಿ ಪರವಾನಗಿ ನವೀಕರಣ ಮಾಡಲಾಗಿದೆಯೇ, ಔಷಧಗಳ ಮಾರಾಟ ಸಂಬಂಧ ಆರೋಗ್ಯ ಇಲಾಖೆಯ ನಿಯಮಗಳು ಪಾಲನೆಯಾಗುತ್ತಿವೆಯೇ, ಅವಧಿ ಮೀರದಿ ಔಷಧಗಳನ್ನು ಯಾವ ರೀತಿ ವಿಲೇವಾರಿ ಮಾಡಲಾಗುತ್ತಿದೆ, ಅಂಗಡಿಗಳಲ್ಲಿ ಔಷಧಗಳ ಸಂಗ್ರಹಣೆ ವಿಧಾನವನ್ನು ಪರಿಶೀಲಿಸಿದರು.
ವೈದ್ಯರ ಸಲಹಾ ಚೀಟಿಗಳಿಲ್ಲದೆ ಸಾರ್ವಜನಿಕರಿಗೆ ಔಷಧಗಳನ್ನು ಮಾರಾಟ ಮಾಡುವಂತಿಲ್ಲ. ಈ ಸಂಬಂಧ ಮೆಡಿಕಲ್‌ ಶಾಪ್‌ನ ಮುಂದೆ ನಾಗರಿಕರಿಗೆ ಕಾಣುವಂತೆ ಜಾಗೃತಿ ಫಲಕಗಳನ್ನು ಅಳವಡಿಕೆ ಮಾಡಬೇಕು. ವೈದ್ಯರ ಲಿಖಿತ ಸಲಹೆ ಹಾಗೂ ಚೀಟಿಗಳು ಇಲ್ಲದೆ ಮತ್ತು ಅಥವಾ ನಶೆ ಭರಿಸುವ ಔಷಧಗಳನ್ನು ಮಾರಾಟ ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ನಿಯಮ ಉಲ್ಲಂಘಿಸಿ ನಶೆ ಬರುವ ಔಷಧಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಮೆಡಿಕಲ್ ಶಾಪ್‍ಗಳ ಮುಂಭಾಗ ಕಡ್ಡಾಯವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅವಧಿ ಮುಗಿದ ಮಾತ್ರೆಗಳು, ಸಿರಪ್‌ ಹಾಗೂ ಎಲ್ಲ ಬಗೆಯ ಔಷಧಗಳನ್ನು ಅಂಗಡಿಗಳ ಮುಂದೆ ಬಿಸಾಡಬಾರದು. ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಅಂಗಡಿಗಳ ಮುಂಭಾಗ ಕಡ್ಡಾಯವಾಗಿ ಕಸ ಸಂಗ್ರಹ ಡಬ್ಬಿಗಳನ್ನು ಇರಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮಾಲೀಕರಿಗೆ ಸೂಚಿಸಿದರು.
ಪರಿಶೀಲನೆ ವೇಳೆ ಕೆಲವು ಮೆಡಿಕಲ್ ಶಾಪ್‍ಗಳ ಮುಂದೆ ಔಷಧಗಳ ಕವರ್‌, ಚೀಟಿಗಳ ತ್ಯಾಜ್ಯ ಎಲ್ಲೆಂದರದಲ್ಲಿ ಹರಡಿರುವುದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಔಷಧ ಅಂಗಡಿಗಳ ಒಳಗೆ ಹಾಗೂ ಹೊರಗೆ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಮೆಡಿಕಲ್ ತ್ಯಾಜ್ಯ ಅಪಾಯಕಾರಿಯಾಗಿದ್ದು ಎಲ್ಲೆಂದರಲ್ಲಿ ಬಿಸಾಡಬಾರದು ಎಂದು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net