ಮ್ಯಾಪಿಂಗ್ ಕೆಲಸಕ್ಕೆ ಎಸ್‌ಡಿಪಿಐ ನೆರವು

ಕಂಪ್ಲಿ 2ನೇ ವಾರ್ಡ್ ಉರ್ದು ಸಹಿಪ್ರಾ ಶಾಲೆ ಆವರಣದಲ್ಲಿ ಎಸ್‌ಡಿಪಿಐದಿಂದ ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಯೆ ಸಹಾಯ ಕೇಂದ್ರ ಆರಂಭಿಸಲಾಯಿತು. ಬಿಎಲ್‌ಒ ಕೆ.ಮೌಲಾಲಿ, ಎಸ್‌ಡಿಪಿಐ ಪದಾಧಿಕಾರಿಗಳಾದ ಮಹಮ್ಮದ್ ರಫಿ, ಇಮ್ರಾನ್‌ಖಾನ್, ಪಿ.ಅಬುಬೂಕ್ಕರ್, ವಿ.ರಾಜಸಾಬ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಉರ್ದು
  • ಸಹಿಪ್ರಾ
  • ಶಾಲೆ
ಕಂಪ್ಲಿ: ಮತದಾನದಿಂದ ಯಾರೂ ವಂಚಿತರಾಗಬಾರದು ಎನ್ನುವ ಡಾ.ಬಿ.ಆರ್.ಅಂಬೇಡ್ಕರ್ ಆಶಯವನ್ನು ಸಾಕಾರಗೊಳಿಸಲು ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಮ್ಯಾಪಿಂಗ್‌ಗಾಗಿ ಎಸ್‌ಡಿಪಿಐ ಸಹಾಯ ಕೇಂದ್ರ ಆರಂಭಿಸಿದೆ ಎಂದು ಪಕ್ಷದ ಕ್ಷೇತ್ರ ಉಪಾಧ್ಯಕ್ಷ ಮಹಮ್ಮದ್ ರಫಿಕ್ ಹೇಳಿದರು.
ಪಟ್ಟಣದ 2ನೇವಾರ್ಡ್ ಉರ್ದು ಸಹಿಪ್ರಾ ಶಾಲೆ ಬಳಿ ಎಸ್‌ಐಆರ್ ಮ್ಯಾಪಿಂಗ್ ಸಹಾಯ ಕೇಂದ್ರಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ದೇಶದ ನಾನಾ ಕಡೆಗಳಲ್ಲಿ ಎಸ್‌ಐಆರ್ ಮ್ಯಾಪಿಂಗ್ ಕೆಲಸದಲ್ಲಿ ಬಿಎಲ್‌ಒಗಳು ಒತ್ತಡಕ್ಕೊಳಗಾಗಿ ಆತ್ಮಹತ್ಯೆ, ಅನಾರೋಗ್ಯಕ್ಕೀಡಾಗಿದ್ದನ್ನು ಗಮನಿಸಿ ಪಟ್ಟಣದ 23ವಾರ್ಡ್‌ಗಳ ಬಿಎಲ್‌ಒಗಳಿಗೆ ಮ್ಯಾಪಿಂಗ್ ಕೆಲಸದಲ್ಲಿ ನೆರವು ನೀಡಲು ಸಹಾಯ ಕೇಂದ್ರ ತೆರೆದಿದೆ. ಮತದಾರರು ಹೆಸರು ಬಿಟ್ಟು ಹೋಗದಂತೆ ಜಾಗ್ರತೆ ವಹಿಸಬೇಕಿದೆ ಎಂದರು.
ಬಿಎಲ್‌ಒ ಕೆ.ಮೌಲಾಬಿ, ಎಸ್‌ಡಿಪಿಐ ಕ್ಷೇತ್ರಾಧ್ಯಕ್ಷ ಇಮ್ರಾನ್‌ಖಾನ್, ಪದಾಧಿಕಾರಿಗಳಾದ ಪಿ.ಅಬುಬೂಕ್ಕರ್, ವಿ.ರಾಜಸಾಬ್, ಎಂ.ಪಿ.ಹುಸೇನ್‌ಬಾಷಾ, ಉಮರ್, ಹಾರೀಫ್, ಉಸ್ಮಾನ್ ತೋಹಿದ್, ಸಾದಿಕ್, ಮನ್ಸೂರ್, ಮುರ್ತುಜಾ ಖಾದ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net