ಅಡುಗೆ ಅನಿಲಕ್ಕಾಗಿ ಪರದಾಟ

ಕುರುಗೋಡಿನಲ್ಲಿ ವಿತರಕ ಅಂಗಡಿ ಮುಂದೆ ಸಿಲಿಂಡರ್ ಪಡೆಯಲು  ಸರತಿ ಸಾಲಿನಲ್ಲಿ ನಿಂತ ಜನ.
ಕುರುಗೋಡಿನಲ್ಲಿ ವಿತರಕ ಅಂಗಡಿ ಮುಂದೆ ಸಿಲಿಂಡರ್ ಪಡೆಯಲು ಸರತಿ ಸಾಲಿನಲ್ಲಿ ನಿಂತ ಜನ.
Published on
ಕುರುಗೋಡು: ಸಿಲಿಂಡರ್ ಪಡೆಯಲು ಸಾರ್ವಜನಿಕರು ವಿತರಕ ಅಂಗಡಿ ಮುಂದೆ ಸೋಮವಾರ ಮುಗಿಬಿದ್ದರು.
ತಾಲೂಕಿನ ಕುರುಗೋಡು, ಕೋಳೂರು, ಸೋಮಸಮುದ್ರ ಸೇರಿ ಮೂರು ವಿತರಕ ಘಟಕದ ಮೂಲಕ ಬಾದನಹಟ್ಟಿ, ಗೆಣೆಕೆಹಾಳ್, ಕಲ್ಲುಕಂಬ, ಸೋಮಲಾಪುರ, ಸಿದ್ದಮ್ಮನಹಳ್ಳಿ ಸೇರಿದಂತೆ ಹಲವು ಗ್ರಾಮಕ್ಕೆ ವಾಹನದ ಮೂಲಕ ಸಿಲಿಂಡರ್ ಮನೆಗೆ ತಲುಪಿಸಲಾಗುತ್ತಿತ್ತು.
ಒಂದು ವಾರದಿಂದ ದಾಸ್ತನು ಇಲ್ಲದೆ ಗ್ರಾಮಗಳಿಗೆ ವಾಹನ ತೆರಳಿಲ್ಲ. ಜತೆಗೆ ಅಮೆರಿಕಾ ಹಾಗೂ ಇಸ್ರೇಲ್ ದೇಶಗಳು ಇರಾನ್ ಮೇಲೆ ಯುದ್ಧ ನಡೆಸುತ್ತಿರುವ ಹಿನ್ನೆಲೆ ಅನಿಲ ಅಭಾವ ಸೃಷ್ಠಿಯಾಗಲಿದೆ ಎಂಬ ವದಂತಿ ಎಲ್ಲೆಡೆ ಹರಡಿದೆ. ಹೀಗಾಗಿ ಸಾರ್ವಜನಿಕರು ಸಿಲಿಂಡರ್‌ಗಾಗಿ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಡಬಲ್ ಸಿಲಿಂಡರ್ ಪಡೆಯುವ ಕೆಲವರು ಒಂದನ್ನು ಗೃಹ ಉಪಯೋಗಕ್ಕೆ ಬಳಸಿ ಕೊಂಡು ಇನ್ನೊಂದನ್ನು ಹೋಟೆಲ್ ಮತ್ತು ಟೀ ಅಂಗಡಿಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿರುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಅಗತ್ಯ ದಾಸ್ತುನು ಬಂದಿದೆ. ಎಂದಿನಂತೆ ಅಡುಗೆ ಅನಿಲವನ್ನು ವಾಹನದ ಮೂಲಕ ಮನೆಗೆ ಪೂರೈಸಲಾಗುತ್ತಿದೆ. ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಡುಗೆ ಅನಿಲ ವಿತರಕರೊಬ್ಬರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net