ಶಾಲಾ ವಾಹನಗಳು ನಿಯಮ ಉಲ್ಲಂಘಿಸಿದರೆ ರ‍್ಸಿ ರದ್ದು

ಹೊಸಪೇಟೆ ಆರ್ ಟಿಒ ಕಚೇರಿ ಆವರಣದಲ್ಲಿ ಸೋಮವಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಜಾಗೃತಿ ಕರ‍್ಯಕ್ರಮದಲ್ಲಿ ಮಾತನಾಡಿದರು. ವಾಹನ ನಿರೀಕ್ಷಕರಾದ ಪ್ರದೀಪ್ ಹಡಗಲಿ, ಮಹ್ಮದ್ ಖಾಲಿದ್, ಮೋಟಾರ್ ವಾಹನ ನಿರೀಕ್ಷಿಕರು ಶರಣ ಬಸವ ಹಾಗೂ ಸತ್ಯನಾರಾಯಣ ರೆಡ್ಡಿ ಇತರರಿದ್ದರು.
ಹೊಸಪೇಟೆ ಆರ್ ಟಿಒ ಕಚೇರಿ ಆವರಣದಲ್ಲಿ ಸೋಮವಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಜಾಗೃತಿ ಕರ‍್ಯಕ್ರಮದಲ್ಲಿ ಮಾತನಾಡಿದರು. ವಾಹನ ನಿರೀಕ್ಷಕರಾದ ಪ್ರದೀಪ್ ಹಡಗಲಿ, ಮಹ್ಮದ್ ಖಾಲಿದ್, ಮೋಟಾರ್ ವಾಹನ ನಿರೀಕ್ಷಿಕರು ಶರಣ ಬಸವ ಹಾಗೂ ಸತ್ಯನಾರಾಯಣ ರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 103 ಪ್ರಕರಣ ದಾಖಲಿಸಿ, 11.82 ಲಕ್ಷ ರೂ. ದಂಡ ವಸೂಲಿ
ಹೊಸಪೇಟೆ: ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಿಯಮ ಮೀರಿ ಸಂಚರಿಸುತ್ತಿದ್ದ 103 ಶಾಲಾ-ಕಾಲೇಜು ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು 11.82 ಲಕ್ಷ ರೂ. ದಂಡ ಹಾಗೂ ತೆರಿಗೆ ವಸೂಲಿ ಮಾಡಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ತಿಳಿಸಿದರು.
ನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಾಗೃತಿ ಕರ‍್ಯಕ್ರಮದಲ್ಲಿ ಮಾತನಾಡಿದರು. ಕರ‍್ಯಾಚರಣೆ ವೇಳೆ 15 ರ‍್ಷ ಪರ‍್ಣಗೊಂಡ 61 ವಾಹನಗಳ ನೋಂದಣಿ ಪತ್ರ (ರ‍್ಸಿ) ರದ್ದುಪಡಿಸಲಾಗಿದೆ. ಜತೆಗೆ, ಸೂಕ್ತ ರಹದಾರಿ (ರ‍್ಮಿಟ್) ಹಾಗೂ ರ‍್ಹತಾ ಪತ್ರವಿಲ್ಲದ 40ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಪ್ರತಿಯೊಂದು ಶಾಲಾ ವಾಹನದಲ್ಲಿ ಜಿಪಿಎಸ್ ಸಿಸಿಟಿವಿ ಮತ್ತು ಅಗ್ನಿಶಾಮಕ ಉಪಕರಣ ಕಡ್ಡಾಯ. ಆಕಸ್ಮಿಕ ಅಪಾಯಗಳ ತಡೆಗೆ ತರ‍್ತು ನರ‍್ಗಮನ ಬಾಗಿಲ ವ್ಯವಸ್ಥೆ ಇರಬೇಕು. ಮದ್ಯಪಾನ ಮಾಡಿ ಚಾಲನೆ ಮಾಡುವುದು ನಿಷಿದ್ಧ. ಕಡ್ಡಾಯ ಸಮವಸ್ತ್ರ ಹಾಗೂ ವಾಹನದಲ್ಲೊಬ್ಬರು ಸಹಾಯಕರಿರಬೇಕು. ಚಾಲನಾ ಪರವಾನಗಿ, ರ‍್ಸಿ, ಎಫ್ಸಿ, ಇನ್ಶೂರೆನ್ಸ್ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳು ಚಾಲ್ತಿಯಲ್ಲಿರಬೇಕು ಎಂದರು.
ಏಪ್ರಿಲ್ನಿಂದ ಜೂನ್ 2026ರ ತ್ರೈಮಾಸಿಕ ಅವಧಿಯಲ್ಲಿ ಲಾರಿ, ಆಟೋ, ಮ್ಯಾಕ್ಸಿಕ್ಯಾಬ್ ಸೇರಿದಂತೆ ವಿವಿಧ ವಾಣಿಜ್ಯ ವಾಹನಗಳ ತಪಾಸಣೆ ನಡೆಸಲಾಗಿದೆ. ದಾಖಲೆಗಳ ಕೊರತೆ ಹಾಗೂ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 1,931 ಪ್ರಕರಣಗಳನ್ನು ದಾಖಲಿಸಿಕೊಂಡು, ಒಟ್ಟು 1,09,18,488 ದಂಡ ವಸೂಲಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net