ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ಮಾರಾಟ

ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಹತ್ತಿರದ ಅರಣ್ಯ ಇಲಾಖೆ ನರ್ಸರಿಯಲ್ಲಿ ಸಸಿಗಳಿಗೆ ನೀರು ಹಾಯಿಸುತ್ತಿರುವ ಸಿಬ್ಬಂದಿ.
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಹತ್ತಿರದ ಅರಣ್ಯ ಇಲಾಖೆ ನರ್ಸರಿಯಲ್ಲಿ ಸಸಿಗಳಿಗೆ ನೀರು ಹಾಯಿಸುತ್ತಿರುವ ಸಿಬ್ಬಂದಿ.
Published on
ಹಗರಿಬೊಮ್ಮನಹಳ್ಳಿ: ಮಾಲವಿ ಬಳಿಯಿರುವ ತಾಲೂಕು ಸಾಮಾಜಿಕ ಪ್ರಾದೇಶಿಕ ಉಪ ವಲಯ ಅರಣ್ಯ ಇಲಾಖೆಯಿಂದ ಸಸ್ಯಗಳನ್ನು ಬೆಳೆಸಿ ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಈ ನರ್ಸರಿಯಲ್ಲಿ ಮಾಗಣಿ, ಸಿಲ್ವರ್, ತೇಗ, ನೇರಳೆ, ಸೀತಾಫಲ, ಹತ್ತಿ, ಅರಳೆ, ಮಾವು, ಶ್ರೀಗಂಧ ಮತ್ತು ಬೇವಿನ ಸಸಿಗಳನ್ನು ಬೆಳೆಸಲಾಗುತ್ತಿದೆ. ಇಲಾಖೆಯಿಂದ 50 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ರೈತರಿಗೆ ಆರು ರೂ.ಗೆ ಒಂದರಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದಕ್ಕಾಗಿ 15 ಸಾವಿರ ಸಸಿಗಳನ್ನು ಮೀಸಲಿರಿಸಲಾಗಿದೆ.
ಇನ್ನುಳಿದ 35 ಸಾವಿರ ಸಸಿಗಳನ್ನು ನರೇಗಾ ಯೋಜನೆ, ಅರಣ್ಯೀಕರಣಕ್ಕೆ ಬಳಸಲಾಗುತ್ತಿದೆ. ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಶಾಲೆ, ಕಾಲೇಜ್ ಆವರಣದಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. ಇದರೊಂದಿಗೆ ಮಾಲವಿ ಗ್ರಾಮದಿಂದ ಕೋಗಳಿ ತಾಂಡದವರೆಗೆ 3 ಕಿ.ಮೀ. ಹಾಗೂ ಮಾದೂರು ಗ್ರಾಮದಿಂದ ಹಗರಿಬೊಮ್ಮನಹಳ್ಳಿವರೆಗೆ 3 ಕಿ.ಮೀ.ವರೆಗೆ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ.
ನರ್ಸರಿ 10 ಎಕರೆ ಪ್ರದೇಶದಲ್ಲಿರುವ ನರ್ಸರಿಯಲ್ಲಿ ಸಸಿಗಳು ಬೆಳೆಸಲಾಗುತ್ತಿದೆ. ರಿಯಾಯಿತಿ ದರದಲ್ಲಿ ಸಸಿಗಳನ್ನು ನಿಡುವುದರಿಂದ ರೈತರು ಸದುಪಯೋಗ ಪಡೆಯಬೇಕು ಎಂದು ಸಾಮಾಜಿಕ ಉಪ ವಲಯ ಅರಣ್ಯ ಅಧಿಕಾರಿ ಸಿ.ಮಂಜುನಾಥ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net