ತೆಕ್ಕಲಕೋಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಆಯೋಜಿಸಿದ್ದ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಉದ್ಘಾಟಿಸಿದರು. ತಾಲೂಕು ಕ್ಷೇತ್ರ ಯೋಜನಾಧಿಕಾರಿ ವಸಂತ್ ಎಸ್., ವಿಚಕ್ಷಣಾಧಿಕಾರಿ ರಾಕೇಶ, ವಲಯದ ಮೇಲ್ವಿಚಾರಕಿ ನಾಗವೇಣಿ ಇತರರಿದ್ದರು.
ಸಿರಿಗೇರಿ; ತೆಕ್ಕಲಕೋಟೆಯ ಶ್ರೀ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ತೆಕ್ಕಲಕೋಟೆ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಮ್ಮೂರು-ನಮ್ಮ ಕೆರೆ, ಶುದ್ಧಗಂಗಾ ಘಟಕ, ಜನಮಂಗಲ ಕಾರ್ಯಕ್ರಮ, ಸುಜ್ಞಾನನಿಧಿ ಶಿಷ್ಯವೇತನ ಸೇರಿದಂತೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಸಮಾಜಮುಖಿಯಾಗಿವೆ ಎಂದರು.
ತಾಲೂಕು ಕ್ಷೇತ್ರ ಯೋಜನಾಧಿಕಾರಿ ವಸಂತ್ ಎಸ್., ಒಕ್ಕೂಟಗಳ ಮಹತ್ವ, ಒಕ್ಕೂಟ ಪದಾಧಿಕಾರಿಗಳ ಜವಾಬ್ದಾರಿ, 3 ತಿಂಗಳಿಗೊಮ್ಮೆ ಒಕ್ಕೂಟ ಸಭೆ ಹಾಗೂ ಯೋಜನೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಕುರಿತು ಮಾಹಿತಿ ನೀಡಿದರು.
ತರಬೇತಿಯಲ್ಲಿ ತಾಲೂಕು ವಿಚಕ್ಷಣಾಧಿಕಾರಿ ರಾಕೇಶ, ಸ್ವಸಹಾಯ ಸಂಘಗಳ ಆರ್ಥಿಕ ಶಿಸ್ತು, ಬಡ್ಡಿ ದರ, ಸಿಬಿಲ್ ವ್ಯವಸ್ಥೆ, ಪ್ರಗತಿನಿಧಿ ಕಾರ್ಯಕ್ರಮಗಳು ಹಾಗೂ ಬ್ಯಾಂಕ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ವಲಯದ ಮೇಲ್ವಿಚಾರಕಿ ನಾಗವೇಣಿ, ಒಕ್ಕೂಟದ ಅಧ್ಯಕ್ಷರಾದ ರುಕ್ಷಾನಾ, ವೆಂಕಟೇಶ, ರಾಮಾಂಜನೇಯ ಹಾಗೂ ಸೇವಾಪ್ರತಿನಿಧಿಗಳಾದ ಫರಿದಾಬಾನು, ರಶೀದಾ, ಶಕುಂತಲಾ, ಹೇಮಾವತಿ ಮತ್ತು ಒಕ್ಕೂಟ ಪದಾಧಿಕಾರಿಗಳು ಇದ್ದರು.