ನಗರಸಭೆಯಲ್ಲಿ 122 ಕೋಟಿ ರೂ. ಬಜೆಟ್ ಮಂಡನೆ

ಹೊಸಪೇಟೆ ನಗರಸಭೆಯಲ್ಲಿ ಅಧ್ಯಕ್ಷ ರೂಪೇಶ್ ಕುಮಾರ್ 2026-27 ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಉಪಾಧ್ಯಕ್ಷ ಜೀವ ರತ್ನಂ, ಸ್ಥಾಯಿ ಸಮಿತಿ ಅಧ್ಯಕ್ಷ ಶರವಣ್, ಪೌರಾಯುಕ್ತ ಶಿವಕುಮಾರ್ ಎರಗುಡಿ ಇದ್ದರು.
ಹೊಸಪೇಟೆ ನಗರಸಭೆಯಲ್ಲಿ ಅಧ್ಯಕ್ಷ ರೂಪೇಶ್ ಕುಮಾರ್ 2026-27 ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಉಪಾಧ್ಯಕ್ಷ ಜೀವ ರತ್ನಂ, ಸ್ಥಾಯಿ ಸಮಿತಿ ಅಧ್ಯಕ್ಷ ಶರವಣ್, ಪೌರಾಯುಕ್ತ ಶಿವಕುಮಾರ್ ಎರಗುಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 5.39 ಲಕ್ಷ ರೂ. ಉಳಿತಾಯ ತೋರಿಸಿದ ಅಧ್ಯಕ್ಷ ರೂಪೇಶ್ ಕುಮಾರ್
ಹೊಸಪೇಟೆ: ಇಲ್ಲಿನ ನಗರಸಭೆಯಲ್ಲಿ ಗುರುವಾರ ಅಧ್ಯಕ್ಷ ರೂಪೇಶ್ ಕುಮಾರ್ 2026-27 ನೇ ಸಾಲಿನ 122 ಕೋಟಿ ರೂ. ಬಜೆಟ್ ಮಂಡನೆ ಮಾಡಿದ್ದು, ಅಂದಾಜು 5.39 ಲಕ್ಷ ರೂ. ಉಳಿತಾಯ ತೋರಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳು, ತೆರಿಗೆ ಸಂಗ್ರಹಗಳಿAದ ಹೆಚ್ಚಿನ ಧನ ಸಹಾಯ ನಿರೀಸಿರುವ ಪ್ರಸಕ್ತ ಸಾಲಿನಲ್ಲಿ ವಿವಿಧ ಮೂಲಗಳಿಂದ ಒಟ್ಟು 122 ಕೋಟಿ ರೂ. ಆದಾಯ ನಿರೀಸಲಾಗಿದೆ. ಇದರಲ್ಲಿ 78.99 ಕೋಟಿ ರೂ. ಸರ್ಕಾರದ ಅನುದಾನ, 2026-27ನೇ ಸಾಲಿನಲ್ಲಿ ನಗರಸಭೆ ನಿಧಿ 34.87 ಕೋಟಿ, ಇತರೆ ಇಲಾಖೆಗಳು ಪಾವತಿಸಬೇಕಾದ ಅಸಾಮಾನ್ಯ ಆದಾಯ 9.10 ಕೋಟಿ. ರೂ. ಆದಾಯವಾಗಿದೆ. ಒಟ್ಟಾರೆ ನಗರಸಭೆ ಆಯವ್ಯಯ ವೆಚ್ಚ 122. ಕೋಟಿ ರೂ ವೆಚ್ಚದಲ್ಲಿ 5.39 ಕೋಟಿ ರೂ. ಉಳಿಕೆಯನ್ನು ತೋರಿಸಲಾಗಿದೆ.
ನಗರಸಭೆಯಿಂದ ಭರಿಸಬೇಕಾದ ಅಂದಾಜು ಖರ್ಚುಗಳಲ್ಲಿ ಕುಡಿವ ನೀರು ಸರಬರಾಜಿಗೆ ಸಂಬAದಿಸಿದAತೆ 3.70 ಕೋಟಿ ರೂ., ಕಟ್ಟಡಗಳು, ರಸ್ತೆಗಳು, ಚರಂಡಿಗಳು, ಕಲ್ವರ್ಟ್ಗಳು, ಮ್ಯಾನ್ ಹೋಲ್‌ಗಳ ದುರಸ್ತಿ ಹಾಗೂ ಬೀದಿ ದೀಪ ನಿರ್ವಹಣೆಗೆ 12.36 ಕೋಟಿ ರೂ., ಎಸ್ಸಿಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ 1.29 ಕೋಟಿ ರೂ., ವಾಹನಗಳ ಇಂಧನ ಹಾಗೂ ದುರಸ್ತಿ ಮತ್ತು ನಿರ್ವಹಣೆ, ಹೊರಗುತ್ತಿಗೆ ನೌಕರರ ವೇತನ, ಕಚೇರಿಯ ಯಂತ್ರೋಪಕರಣ ಹಾಗೂ ಕಂಪ್ಯೂಟರ್‌ಗಳಿಗೆ, ರಸ್ತೆಗಳ ನಿರ್ಮಾಣ, ಚಂರAಡಿ, ಮಳೆ ನೀರು ಚರಂಡಿ ನಿರ್ಮಾಣಕ್ಕೆ, ಸ್ಮಶಾನ ಅಭಿವೃದ್ಧಿಗೆ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ, ಯುಜಿಡಿ ಸಂಪರ್ಕ ಸೇರಿದಂತೆ ಇತರೆ ಯೋಜನೆಗಳಿಗೆ 122 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.

ಗಣ್ಯರ ವೃತ್ತದ ಗದ್ದಲ

ಎರಡು ವರ್ಷದ ಹಿಂದೆ 44 ಲಕ್ಷ ರೂ. ವೆಚ್ಚದಲ್ಲಿ ನಗರದ ಮದಕರಿ ವೃತ್ತ ಅಭಿವೃದ್ಧಿಗೆ ಸಾಮಾನ್ಯ ಸಭೆಯಲ್ಲಿ ಠಾರಾವು ಆಗಿದೆ. ಇಲ್ಲಿವರೆಗೆ ಅನುಮೋದನೆ ಆಗಿಲ್ಲ. ಜಯಂತಿಯಲ್ಲಿ ಮಾತ್ರ ಪುತ್ತಳಿಗಳ ಸ್ವಚ್ಛತೆ ಮುಂದಾಗುವ ಬದಲು ಎಲ್ಲ ವೃತ್ತ, ಪುತ್ತಳಿಗಳ ನಿರ್ವಹಣೆಗೆ ಇಬ್ಬರು ಪೌರಾಕಾರ್ಮಿಕರಿಗೆ ಮೀಸಲಿಡಬೇಕು. ಇನ್ನು ಈ ಬಜೆಟ್‌ನಲ್ಲಿ ವೃತ್ತಗಳ ಅಭಿವೃದ್ಧಿಗೆ ಮೀಸಲಿರಿಸಿದ 8 ಲಕ್ಷ ರೂ. ಸಾಲದು. ಈ ತಾರತಮ್ಯ ಮಾಡುವುದು ಸರಿಯಲ್ಲ ಹೆಚ್ಚಿನ ಅನುದಾನ ನೀಡಿ ಎಂದು ಸದಸ್ಯ ಬುಜ್ಜಿ ಹಾಗೂ ರಾಘವೇಂದ್ರ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರೂಪೇಶ್ ಕುಮಾರ್, ವೃತ್ತಗಳ ಅಭಿವೃದ್ಧಿಗೆ 8 ಲಕ್ಷ ರೂ. ಬದಲಿಗೆ 15 ಲಕ್ಷ ರೂ. ಮೀಸಲಿಡುತ್ತೇವೆ ಎಂದು ಭರವಸೆ ನೀಡಿದರು. ಪೌರಾಯುಕ್ತ ಶಿವಕುಮಾರ್ ಉತ್ತರಿಸಿ, ನಿಯಮಾನುಸಾರ ವೃತ್ತಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳುತ್ತೇವೆ ಎಂದರು.

ನಾಮನಿರ್ದೇಶಿತರಿಗೆ ಆದೇಶಿಸುವ ಅಧಿಕಾರವಿಲ್ಲ

ಮದಕರಿ ವೃತ್ತಕ್ಕೆ 44 ಲಕ್ಷ ರೂ ನೀಡುವುದಾದರೆ, ಉಳಿದ ವೃತ್ತಗಳಿಗೆ 15 ಲಕ್ಷ ರೂ. ಸಾಕಾಗುವುದೇ? ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬಾರದು. ಬಜೆಟ್ ಮುನ್ನ ಪೂರ್ವಭಾವಿ ಸಭೆ ನಡೆಸಬೇಕು. ಎಲ್ಲರ ಸಲಹೆ ಸೂಚನೆ ಪಡೆಯಬೇಕು ಎಂದು ನಾಮನಿರ್ದೇಶಿತ ಸದಸ್ಯ ರವಿಕುಮಾರ್ ವೃತ್ತಗಳ ಅಭಿವೃದ್ಧಿ ಅನುದಾನ ಹಂಚಿಕೆಯನ್ನು ಪ್ರಶ್ನೆ ಮಾಡಿದರು. ಇದಕ್ಕೆ ಸದಸ್ಯ ಬುಜ್ಜಿ ಪ್ರತಿಕ್ರಿಯಿಸಿ, ಮದಕರಿ ವೃತ್ತ ಅಭಿವೃದ್ಧಿ ಈ ಬಜೆಟ್ ಅನುದಾನ ಅಲ್ಲ, ಎರಡು ವರ್ಷದ ಹಿಂದಿನದು. ಮದಕರಿ ವೃತ್ತದ ಬಗ್ಗೆ ತಿಳಿದುಕೊಳ್ಳಿ ಎಂದು ಪರಸ್ಪರ ವಾಗ್ವಾದ ನಡೆಸಿದರು. ನಂತರ ಅಧ್ಯಕ್ಷ ರೂಪೇಶ್ ಕುಮಾರ್ ಮಾತನಾಡಿ, ಸಭೆಯಲ್ಲಿ ಕೇಳುವ ಅಧಿಕಾರ ನಿಮಗಿಲ್ಲ. ನಾಮನಿರ್ದೇಶಿತ ಸದಸ್ಯರು ಸಲಹೆ ನೀಡಬಹುದು ಅಷ್ಟೇ... ಆದೇಶ ನೀಡುವಂತ್ತಿಲ್ಲ ಎಂದು ಖಾರವಾಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net