ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಗುರುವಾರಜಿಲ್ಲಾಧಿಕಾರಿಕವಿತಾಎಸ್. ಮನ್ನಿಕೇರಿಜಿಲ್ಲಾಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿದರು. ಜಿಪಂ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್‌ಷಾ, ಎಸ್ಪಿ ಎಸ್. ಜಾಹ್ನವಿ, ಅರಣ್ಯ ಇಲಾಖೆ ಉಪಸಂರಕ್ಷಾಣಾಧಿಕಾರಿ ಅನುಪಮ, ಗಣಿ ಮತ್ತು ಭೂವಿಜ್ಞಾನಇಲಾಖೆಯಉಪನಿರ್ದೇಶಕರಿಯಾಜ್, ಪ್ರಾದೇಶಿಕ ಸಾರಿಗೆಅಧಿಕಾರಿದಾಮೋದರ, ಲೋಕೋಪಯೋಗಿ ಇಲಾಖೆ ಇಇ ಹೇಮರಾಜ್‌ಇತರರಿದ್ದರು.
ಜಿಲ್ಲಾಟಾಸ್ಕ್ಫೋರ್ಸ್ ಸಭೆಯಲ್ಲಿಜಿಲ್ಲಾಧಿಕಾರಿಕವಿತಾಎಸ್. ಮನ್ನಿಕೇರಿ ಸೂಚನೆ
ಹೊಸಪೇಟೆ: ಜಿಲ್ಲೆಯಲ್ಲಿಅಕ್ರಮಕಲ್ಲುಗಣಿಗಾರಿಕೆ, ಮರಳು ಸಾಗಣಿ ಹಾಗೂ ಮಣ್ಣು ಸಾಗಣೆ ಸೇರಿದಂತೆ ವಿವಿಧರೀತಿಯಒಟ್ಟು 16 ಪ್ರಕರಣ ದಾಖಲಿಸಿ 4.45 ಲಕ್ಷರೂ. ದಂಡ ವಿಧಿಸಲಾಗಿದೆಎಂದುಜಿಲ್ಲಾಧಿಕಾರಿಕವಿತಾಎಸ್. ಮನ್ನಿಕೇರಿಎಙದು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಗುರುವಾರ ನಡೆದಜಿಲ್ಲಾಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವಅನಧಿಕೃತಗಣಿಗಾರಿಕೆ ಮತ್ತುಅಕ್ರಮ ಮರಳು ಮಾರಾಟಜಾಲವನ್ನು ಬೇರುಸಹಿತಕಿತ್ತೆಸೆಯಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವಗಣಿಗಾರಿಕೆ ಪ್ರದೇಶಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನಗಣಿಗಾರಿಕೆ, ಮರಳು ಸಾಗಾಟ ನಡೆಸುತ್ತಿರುವುದುಕಂಡುಬAದಲ್ಲಿಅAತಹ ಪರವಾನಗಿಗಳನ್ನು ತಕ್ಷಣವೇ ರದ್ದುಗೊಳಿಸುವುದರ ಜತೆಗೆದಂಡ ವಿಧಿಸಬೇಕುಎಂದು ಸೂಚಿಸಿದರು.
ಜಿಲ್ಲೆಯ ನದಿ ಪಾತ್ರಗಳಲ್ಲಿ ಹಾಗೂ ಹಳ್ಳ-ಕೊಳ್ಳಗಳಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮರಳು ದಂಧೆಯನ್ನುತಡೆಯಲು ಪೊಲೀಸ್ ಮತ್ತುಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿಕಾರ್ಯಾಚರಣೆ ನಡೆಸಬೇಕು. ಅಕ್ರಮವಾಗಿ ಮರಳು ಸಾಗಿಸುವ ವಾಹನಗಳನ್ನು ವಶಪಡಿಸಿಕೊಂಡು, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿಕ್ರಮ ಕೈಗೊಳ್ಳಬೇಕು. ಸರ್ಕಾರದ ನೂತನ ಮರಳು ನೀತಿಯನ್ವಯ ಸಾರ್ವಜನಿಕರಿಗೆ ಮತ್ತು ಸರ್ಕಾರಿ ಕಾಮಗಾರಿಗಳಿಗೆ ಸಕಾಲದಲ್ಲಿ ಮರಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಮರಳು ವಿತರಣಾ ಕೇಂದ್ರಗಳಲ್ಲಿ ಪಾರದರ್ಶಕತೆಕಾಪಾಡಬೇಕು ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಜಿಲ್ಲೆಯಗಡಿಭಾಗದಚೆಕ್ ಪೋಸ್ಟ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ದಿನದ 24ಗಂಟೆ ನಿಗಾ ವಹಿಸಬೇಕು. ರಾತ್ರಿ ವೇಳೆ ನಡೆಯುವಅಕ್ರಮಗಣಿ ಮತ್ತು ಮರಳು ಸಾಗಾಣಿತಡೆಯಲುರಾತ್ರಿ ಗಸ್ತು ಪಡೆಯನ್ನು ಬಲಪಡಿಸಬೇಕು. ಪರಿಸರ ಸಮತೋಲನ ಕಾಯ್ದುಕೊಳ್ಳುವುದು ನಮ್ಮೆಲ್ಲರಜವಾಬ್ದಾರಿ. ನೈಸರ್ಗಿಕ ಸಂಪನ್ಮೂಲಗಳ ಲೂಟಿಯನ್ನುಯಾವುದೇಕಾರಣಕ್ಕೂ ಸಹಿಸುವುದಿಲ್ಲ ಎಂದುಎಚ್ಚರಿಕೆ ನೀಡಿದರು.