ಭಗತ್‌ಸಿಂಗ್ ಆಶಯ ಈಡೇರಿಸುವ ಸಂಕಲ್ಪ ಮಾಡಿ

ಹರಪನಹಳ್ಳಿ ತಾಲೂಕಿನ ಕೆರೆ ಗುಡಿಹಳ್ಳಿಯಲ್ಲಿ ಅಖಿಲ ಭಾರತ ಕಿಸಾನ್ ಸಭಾದಿಂದ ಆಯೋಜಿಸಿದ್ದ 6ನೇ ತಾಲೂಕು ಸಮ್ಮೇಳನದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ ಸಂತೋಷ ಮಾತನಾಡಿದರು.
ಹರಪನಹಳ್ಳಿ ತಾಲೂಕಿನ ಕೆರೆ ಗುಡಿಹಳ್ಳಿಯಲ್ಲಿ ಅಖಿಲ ಭಾರತ ಕಿಸಾನ್ ಸಭಾದಿಂದ ಆಯೋಜಿಸಿದ್ದ 6ನೇ ತಾಲೂಕು ಸಮ್ಮೇಳನದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ ಸಂತೋಷ ಮಾತನಾಡಿದರು.
Published on
ಹರಪನಹಳ್ಳಿ: ದೇಶ ಸಂಘರ್ಷದ ಹಾದಿಯಲ್ಲಿದ್ದು, ಭಗತ್ ಸಿಂಗ್ ಅವರ ಆಶಯವನ್ನು ಈಡೇರಿಸುವ ಸಂಕಲ್ಪವನ್ನು ಯುವಕರು ಕೈಗೊಳ್ಳಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ಸಂತೋಷ ತಿಳಿಸಿದರು.
ಕೆರೆ ಗುಡಿಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ಆಯೋಜಿಸಿದ್ದ 6ನೇ ತಾಲೂಕು ಸಮ್ಮೇಳನದಲ್ಲಿ ಸೋಮವಾರ ಮಾತನಾಡಿದರು. ಅನ್ಯಾಯದ ವಿರುದ್ಧ ಹೋರಾಡುವ ಹಾಗೂ ಪ್ರಶ್ನಿಸುವ ಧೈರ್ಯ ತೋರಬೇಕು ಎಂದರು.
ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಅಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಮುಂಬರುವ ಚುನಾವಣೆಗಳಲ್ಲಿ ಪ್ರಗತಿಪರ ಸಂಘಟನೆಯಿಂದ ಸ್ಪರ್ಧಿಸಲು ರೂಪುರೇಷೆ ತಯಾರಿಸಲಾಗುವುದು ಎಂದರು.
ಅಖಿಲ ಭಾರತ ರೈತ ಸಂಘದ ಗೌರವ ಅಧ್ಯಕ್ಷ ಮಸಲವಾಡ ಹನುಮಂತಪ್ಪ ಮಾತನಾಡಿ. ಸರ್ಕಾರ ರೈತರನ್ನು ಪರೋಕ್ಷವಾಗಿ ಗುಲಾಮರನ್ನಾಗಿಸಿಕೊಳ್ಳುವ ಹುನ್ನಾರ ನಡೆಸುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಸಂಘಟನೆಯ ಲಾಭ ಪಡೆದವರು ತಾತ್ಸಾರ ಮನೋಭಾವ ತೋರುತ್ತಿದ್ದಾರೆ ಎಂದರು.
ರೈತ ಮುಖಂಡ ಹೊಸಹಳ್ಳಿ ಮಲ್ಲೇಶ್, ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ನಾಯ್ಕ, ದಲಿತ ಸಂಘಟನೆಯ ಕಬ್ಬಳ್ಳಿ ಮೈಲಪ್ಪ, ಬೂದಿಹಾಳ್ ಸಿದ್ದಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net