ಮೀಸಲಾತಿಯಿಂದ ಅಭಿವೃದ್ಧಿ ಸಾಧ್ಯ

ಹಗರಿಬೊಮ್ಮನಹಳ್ಳಿಯಲ್ಲಿ ಮಾದಿಗ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹಗರಿಬೊಮ್ಮನಹಳ್ಳಿಯಲ್ಲಿ ಮಾದಿಗ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
Published on
ಹಗರಿಬೊಮ್ಮನಹಳ್ಳಿ: ಸಮಾಜದಲ್ಲಿ ತುಳಿತಕ್ಕೊಳಗಾದವರು ಉತ್ತಮ ಶಿಕ್ಷಣ ಪಡೆದಲ್ಲಿ ಉನ್ನತ ಸ್ಥಾನಮಾನ ದೊರೆಯಲಿವೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ತಿಳಿಸಿದರು.
ಮಾದಿಗ ಸಮಾಜದಿಂದ ಭಾನುವಾರ ಅಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೀಸಲಾತಿ ಸೌಲಭ್ಯ ಸರಿಯಾಗಿ ಬಳಸಿದಲ್ಲಿ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯ. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾದ ಅನುದಾವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ಸರಿಯಲ್ಲ ಎಂದು ದೂರಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ಮೀಸಲಾತಿ ಬಲಿಷ್ಠರ ಪಾಲಾಗಬಾರದು. ಮೀಸಲಾತಿಯನ್ನು ಶಿಕ್ಷಣಕ್ಕೆ ಸರಿಯಾಗಿ ಬಳಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆಂದು ಸಲಹೆ ನೀಡಿದರು.
ಕಡಲಬಾಳು ಮಠದ ಮರಿ ಮಹಾಂತ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಲು ಸೂಕ್ತ ವೇದಿಕೆ ಅಗತ್ಯ ಎಂದರು.
ಬಾಚಿಗೊಂಡನಹಳ್ಳಿ ಶಿವಮಹಾಂತ ಸ್ವಾಮೀಜಿ, ಪ್ರಮುಖರಾದ ಹೆಗ್ಡಾಳ್ ರಾಮಣ್ಣ, ಪರಮೇಶಪ್ಪ, ಎಚ್.ಬಸಪ್ಪ, ಕೊಟ್ರೇಶ, ದುರುಗೇಶ, ಯಡ್ರಮ್ಮನಹಳ್ಳಿ ಮರಿಯಪ್ಪ, ಆನಂದಳ್ಳಿ ಪ್ರಭಾಕರ, ಮೈಲಾರಪ್ಪ, ಹನುಮಂತಪ್ಪ, ದುರಗಪ್ಪ, ಕೋಗಳಿ ಉಮೇಶ್, ಅಲಬೂರು ಗಣೇಶ್, ಹಡಗಲಿ ಉಚ್ಚಂಗೆಪ್ಪ, ಆನಂದಳ್ಳಿ ಕೊಟ್ರೇಶ್, ಪೂಜಪ್ಪ, ದೇವೇಂದ್ರ, ಎಚ್.ನಾಗರಾಜ, ಮರಿಸ್ವಾಮಿ, ರಮೇಶ್, ಪರಶುರಾಮ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net