ಲಾರಿಯಲ್ಲಿ ಗುಜರಿ ತ್ಯಾಜ್ಯ ಸಾಗಿಸಲಾಗುತ್ತಿದ್ದು, ಅದರಲ್ಲಿದ್ದ ಪ್ಲಾಸ್ಟಿಕ್ ಹಾಗೂ ಇತರ ಸಾಮಗ್ರಿಗಳು ಹೆದ್ದಾರಿ ಮಧ್ಯೆ ಬಿದ್ದಿದ್ದವು. ಈ ಮಾರ್ಗದಲ್ಲಿ ಹೊಸಪೇಟೆಗೆ ಹೊರಟಿದ್ದ ಪಟ್ಟಣದ ಅರಣ್ಯ ಇಲಾಖೆ ನೌಕರ ರಿಯಾಜ್ ಪಾಷಾ, ಹೆದ್ದಾರಿ ಸಹಾಯಕರ ಗ್ರೂಪಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಹೆದ್ದಾರಿ ಪ್ರಾಧಿಕಾರ ಹಾಗೂ ಕೂಡ್ಲಿಗಿ ಠಾಣೆಯ ಹೆದ್ದಾರಿ ಗಸ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ತ್ಯಾಜ್ಯ ತೆರವು ಮಾಡಲು ಕ್ರಮ ವಹಿಸಿದರು.